ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ನಿಯಂತ್ರಿತ ಮೊಬೈಲ್ ಕಂಪನಿಗಳ ₹6,500 ಕೋಟಿ ಮೌಲ್ಯದ ವಂಚನೆ ಪತ್ತೆ

ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ನಡೆದ ಐಟಿ ದಾಳಿ
Last Updated 31 ಡಿಸೆಂಬರ್ 2021, 15:54 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ನಿಯಂತ್ರಿತ ಮೊಬೈಲ್ ಕಂಪನಿಗಳ ಮೇಲೆ ಈಚೆಗೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ವಂಚನೆ ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಶುಕ್ರವಾರ ತಿಳಿಸಿದೆ.

ಮೊಬೈಲ್ ಕಮ್ಯುನಿಕೇಷನ್ ಮತ್ತು ನಿರ್ಮಾಣ ಕಂಪನಿಗಳ ಮೇಲೆ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ನಡೆಸಿದ ಐಟಿ ದಾಳಿಯಲ್ಲಿ ₹6,500 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಡಿಸೆಂಬರ್ 21ರಂದು ಕರ್ನಾಟಕ ಸೇರಿದಂತೆ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಎರಡು ಪ್ರಮುಖ ಕಂಪನಿಗಳು ರಾಯಲ್ಟಿ ಸ್ವರೂಪದಲ್ಲಿ ವಿದೇಶದಲ್ಲಿರುವ ತನ್ನ ಗ್ರೂಪ್ ಕಂಪನಿಗಳ ಪರವಾಗಿ ₹5,500 ಕೋಟಿಗೂ ಹೆಚ್ಚು ಹಣ ಸಂದಾಯ ಮಾಡಿದೆ ಎಂದು ಬಹಿರಂಗವಾಗಿದೆ.

ಶೋಧನಾ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಲಾದ ಹೆಚ್ಚಿನ ಆದಾಯಗಳಿಗೆ ಸೂಕ್ತ ದಾಖಲೆಗಳಿಲ್ಲ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT