ಶುಕ್ರವಾರ, ಅಕ್ಟೋಬರ್ 30, 2020
27 °C

ಐಟಿಸಿ ಸನ್‌ಫೀಸ್ಟ್‌ ಯಿಪ್ಪೀ ನೂಡಲ್ಸ್‌ಗೆ 10 ವರ್ಷ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈವಿಧ್ಯಮಯ ವಹಿವಾಟು ನಡೆಸುವ ಉದ್ಯಮ ಐಟಿಸಿ ಲಿಮಿಟೆಡ್‌ನ ಸನ್‍ಫೀಸ್ಟ್ ಯಿಪ್ಪೀ, ಅತ್ಯಂತ ಜನಪ್ರಿಯ ಇನ್‍ಸ್ಟಂಟ್ ನೂಡಲ್ಸ್ ಬ್ರ್ಯಾಂಡ್‍ಗಳ ಪೈಕಿ ಒಂದಾಗಿದ್ದು, 10 ವರ್ಷಗಳನ್ನು ಪೂರ್ಣಗೊಳಿಸಿದೆ.

ಕಳೆದ 10 ವರ್ಷಗಳಲ್ಲಿ ಸನ್‌ಫೀಸ್ಟ್‌ ಯಿಪ್ಪೀ ದೇಶದ ಎರಡನೇ ಅತಿದೊಡ್ಡ ಇನ್‍ಸ್ಟಂಟ್ ನೂಡಲ್ಸ್ ಬ್ರ್ಯಾಂಡ್ ಆಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 50ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದೆ.

ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರು ಈ ಇನ್‌ಸ್ಟಂಟ್‌ ನೂಡಲ್ಸ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ. ಬ್ರ್ಯಾಂಡ್‍ನ 10ನೇ ವಾರ್ಷಿಕೋತ್ಸವ ಸಂಭ್ರಮದ ಅನುಭವ ಪಡೆಯಲು ಸನ್‍ಫೀಸ್ಟ್ ಯಿಪ್ಪೀಯ  ಫೇಸ್‍ಬುಕ್ ಇವೆಂಟ್ ಪೇಜ್‍ಗೆ ಗ್ರಾಹಕರು ಭೇಟಿ ಕೊಡಬಹುದು. ಮಾರುಕಟ್ಟೆಗೆ ಬಿಡುಗಡೆಗೊಂಡ ದಶಮಾನೋತ್ಸವ ಆಚರಿಸಲು ಫೇಸ್‍ಬುಕ್‍ ಪುಟಕ್ಕೆ ಗ್ರಾಹಕರನ್ನು ಆಹ್ವಾನಿಸಲಾಗಿದೆ. ಗ್ರಾಹಕರು ತಾವು ನೂಡಲ್ಸ್ ಸವಿಯುವ ಕ್ಷಣಗಳನ್ನು ಸೆರೆ ಹಿಡಿದು ಅವುಗಳನ್ನು ಆ ಪುಟದಲ್ಲಿ ಹಂಚಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು