ಐಟಿಆರ್‌ ಶೇ 50ರಷ್ಟು ಹೆಚ್ಚಳ: ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ

7

ಐಟಿಆರ್‌ ಶೇ 50ರಷ್ಟು ಹೆಚ್ಚಳ: ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ

Published:
Updated:
Deccan Herald

ನವದೆಹಲಿ: ನೋಟು ರದ್ದತಿಯಿಂದಾಗಿ  ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ ಏರಿಕೆಯಾಗಿದೆ.

"2018–19ನೇ ಅಂದಾಜು ವರ್ಷದಲ್ಲಿ ಇದುವರೆಗೆ 6.08 ಕೋಟಿ ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಸಲ್ಲಿಕೆಯಾಗಿದ್ದು, ಹಿಂದಿನ ವರ್ಷಕ್ಕಿಂತಲೂ ಶೇ 50ರಷ್ಟು ಏರಿಕೆಯಾಗಿದೆ' ಎಂದು ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ ಮಾಹಿತಿ ನೀಡಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ರೆವಿನ್ಯೂ ಇಲಾಖೆಯು ನೇರ ತೆರಿಗೆ ಮೂಲಕ ₹ 11.5 ಲಕ್ಷ ಕೋಟಿ ಸಂಗ್ರಹಿಸುವ ಗುರಿ ತಲುಪಲಿದೆ.

‘ನೇರ ತೆರಿಗೆಯ  ಸರಾಸರಿ ಪ್ರಗತಿ ದರ ಶೇ 16.5ರಷ್ಟಿದ್ದು, ನಿವ್ವಳ ನೇರ ತೆರಿಗೆ ಪ್ರಗತಿ ದರ ಶೇ 14.5ರಷ್ಟಿದೆ. ತೆರಿಗೆ ವ್ಯಾಪ್ತಿ ಹೆಚ್ಚಿಸಲು ನೋಟು ರದ್ದತಿ ನೆರವಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ’ ಎಂದಿದ್ದಾರೆ.

ಇದುವರೆಗಿನ ನೇರ ತೆರಿಗೆ ಸಂಗ್ರಹವು ಬಜೆಟ್‌ ಅಂದಾಜಿನ ಶೇ 48ರಷ್ಟಾಗಿದೆ. 

ನೋಟು ರದ್ದತಿ ಬಳಿಕ ಕಾರ್ಪೊರೇಟ್‌ ತೆರಿಗೆ ಪಾವತಿದಾರರ ಸಂಖ್ಯೆ 7 ಲಕ್ಷದಿಂದ 8 ಲಕ್ಷಕ್ಕೆ ಏರಿಕೆಯಾಗಿದೆ.

4 ಗಂಟೆಗಳಲ್ಲಿ ‘ಇ–ಪ್ಯಾನ್‌’: ಪ್ಯಾನ್‌ ವಿತರಣೆ ಸರಳಗೊಳಿಸುವ ಉದ್ದೇಶದಿಂದ ಒಂದು ವರ್ಷದೊಳಗೆ ’ಇ–ಪ್ಯಾನ್‌’ ಸೇವೆ ಆರಂಭಿಸಲಾಗುವುದು. ಅರ್ಜಿ ಸಲ್ಲಿಸಿದ ನಾಲ್ಕು ಗಂಟೆಯೊಳಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಸಿಗಲಿದೆ. ಇದಕ್ಕೆ ದಾಖಲೆಯಾಗಿ ಆಧಾರ್‌ ಸಂಖ್ಯೆಯನ್ನು ನೀಡಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !