ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್ ಸಿಇಒ ಹುದ್ದೆ ಬಿಟ್ಟು ತೆರಳಿದ ಜೆಫ್ ಬೆಜೋಸ್

Last Updated 4 ಜುಲೈ 2021, 10:35 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಯಿಂದ ಜೆಫ್ ಬೆಜೋಸ್ ನಿರ್ಗಮಿಸುತ್ತಿದ್ದಾರೆ.

ಅಮೆಜಾನ್ ಸಿಇಒ ಸ್ಥಾನವನ್ನು ಜುಲೈ 5ರಂದು ಆಂಡಿ ಜಾಸಿಗೆ ಜೆಫ್ ಬೆಜೋಸ್ ಹಸ್ತಾಂತರಿಸಲಿದ್ದಾರೆ. ನಂತರ ಜೆಫ್, ಖಾಸಗಿ ಬಾಹ್ಯಾಕಾಶ ಯಾನ ಯೋಜನೆ ಹಾಗೂ ಇತರ ಕೆಲವೊಂದು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಯೋಚನೆ ಹೊಂದಿದ್ದಾರೆ.

ಸಿಇಒ ಹುದ್ದೆಯಿಂದ ನಿರ್ಗಮಿಸಿದರೂ, ಅಮೆಜಾನ್‌ನಲ್ಲಿ ಮುಖ್ಯ ಸ್ಥಾನವೊಂದರಲ್ಲಿ ಜೆಫ್ ಮುಂದುವರಿಯಲಿದ್ದಾರೆ.

27 ವರ್ಷದ ಹಿಂದೆ ಸಣ್ಣದಾಗಿ, ಪುಸ್ತಕ ಮಾರಾಟದ ಆನ್‌ಲೈನ್ ತಾಣ ಅಮೆಜಾನ್ ಅನ್ನು ರೂಪಿಸಿದ್ದ ಜೆಫ್, ನಂತರದಲ್ಲಿ ವಿವಿಧ ಹಂತಗಳ ಉದ್ಯಮ ವಿಸ್ತರಣೆ ಮಾಡಿದ್ದು, ಪ್ರಸ್ತುತ ಅಮೆಜಾನ್ ಜಗತ್ತಿನ ಅತ್ಯಂತ ಪ್ರಮುಖ ಮತ್ತು ಅತಿ ದೊಡ್ಡ ಜಾಲ ಹೊಂದಿರುವ ಇ ಕಾಮರ್ಸ್ ತಾಣವಾಗಿ ಬೆಳೆದು ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT