ಜೆಟ್‌ ಏರ್‌ವೇಸ್‌ ಸ್ಲಾಟ್‌ ಹಂಚಿಕೆ ತಾತ್ಕಾಲಿಕ: ಕೇಂದ್ರ

ಶನಿವಾರ, ಮೇ 25, 2019
28 °C
ನಾಗರಿಕ ವಿಮಾನಯಾನ ಸಚಿವಾಲಯ ಭರವಸೆ

ಜೆಟ್‌ ಏರ್‌ವೇಸ್‌ ಸ್ಲಾಟ್‌ ಹಂಚಿಕೆ ತಾತ್ಕಾಲಿಕ: ಕೇಂದ್ರ

Published:
Updated:

ಮುಂಬೈ: ಜೆಟ್‌ ಏರ್‌ವೇಸ್‌ ವಿಮಾನಗಳ ಹಾರಾಟಕ್ಕೆ ನಿಗದಿಪಡಿಸಿರುವ ಸದ್ಯಕ್ಕೆ ಬಳಕೆಯಾಗದ ಸಮಯವನ್ನು (ಸ್ಲಾಟ್‌) ಇತರ ವಿಮಾನ ಯಾನ ಸಂಸ್ಥೆಗಳಿಗೆ ಸಂಪೂರ್ಣವಾಗಿ ತಾತ್ಕಾಲಿಕ ನೆಲೆಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಜೆಟ್‌ ಏರ್‌ವೇಸ್‌ ಕಾರ್ಯಾರಂಭ ಮಾಡುತ್ತಿದ್ದಂತೆ ಈ ಸ್ಲಾಟ್‌ಗಳನ್ನು ಮರಳಿಸಲಾಗುವುದು ಎಂದೂ ಭರವಸೆ ನೀಡಲಾಗಿದೆ.

ಜೆಟ್‌ ಏರ್‌ವೇಸ್‌ನ ಮಾರುಕಟ್ಟೆ ಮೌಲ್ಯ ಕಾಪಾಡಲು ಅದರ ಸ್ಲಾಟ್‌ಗಳನ್ನು ಇತರರಿಗೆ ಹಂಚಿಕೆ ಮಾಡಬಾರದು ಎಂದು ಎಸ್‌ಬಿಐ ನೇತೃತ್ವದ ಬ್ಯಾಂಕ್‌ ಒಕ್ಕೂಟ ಮತ್ತು ಸಂಸ್ಥೆಯ ಸಿಬ್ಬಂದಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ಪ್ರಯಾಣಿಕರಿಗೆ ಆಗುವ ಅನನುಕೂಲ ತಪ್ಪಿಸಲು ಜೆಟ್‌ನ ಕೆಲ ಸ್ಲಾಟ್‌ಗಳನ್ನು ಇತರ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಮೂರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಹೀಗೆ ಮಾಡಲಾಗುವುದು ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಹಣಕಾಸಿನ ಮುಗ್ಗಟ್ಟಿಗೆ ಒಳಗಾಗಿರುವ ಜೆಟ್‌ ಏರ್‌ವೇಸ್‌, ಕಳೆದ ಬುಧವಾರ ಹಠಾತ್ತಾಗಿ ತನ್ನ ವಿಮಾನಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ. ಇದರಿಂದ ವಿಮಾನ ಪ್ರಯಾಣಿಕರು ತೀವ್ರ ಅಡಚಣೆ ಎದುರಿಸುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !