ಮಂಗಳವಾರ, ಆಗಸ್ಟ್ 20, 2019
27 °C

ಜೆಟ್‌: ಖರೀದಿ ಆಸಕ್ತಿ ತಿಳಿಸಲು ಆಗಸ್ಟ್‌ 3ರ ಗಡುವು

Published:
Updated:

ಮುಂಬೈ: ನಷ್ಟದಲ್ಲಿರುವ ಖಾಸಗಿ ವಲಯದ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಯನ್ನು ಖರೀದಿಸಲು ಆಸಕ್ತಿ ಪತ್ರ ಸಲ್ಲಿಸಲು ಆಗಸ್ಟ್‌ 3ರ ಗಡುವು ನೀಡಲಾಗಿದೆ.

ದಿವಾಳಿ ಪ್ರಕ್ರಿಯೆ ನಡೆಸಲು 26 ಬ್ಯಾಂಕ್‌ಗಳ ಒಕ್ಕೂಟದಿಂದ ನೆಮಕಗೊಂಡಿರುವ ಗ್ರ್ಯಾಂಟ್‌ ಥೋರ್ನ್‌ಟನ್‌ ಕಂಪನಿಯ ಆಶಿಶ್‌ ಚುಚೇರಿಯಾ ಅವರು ಜೆಟ್‌ ಏರ್‌ವೇಸ್‌ನ ಜಾಲತಾಣದಲ್ಲಿ ಈ ಸಂಬಂಧ ಜಾಹೀರಾತು ನೀಡಿದ್ದಾರೆ. 

ಅಂತಿಮವಾಗಿ ಆಯ್ಕೆಯಾದ ಅರ್ಜಿದಾರರು ಸೆಪ್ಟೆಂಬರ್‌ 5ರ ಒಳಗಾಗಿ ತಮ್ಮ ಖರೀದಿ ಯೋಜನೆಯ ವಿವರ ಸಲ್ಲಿಸಬೇಕು. ಈ ಕುರಿತು ಸೆಪ್ಟಂಬರ್‌ 20ರಂದು ಎನ್‌ಸಿಎಲ್‌ಟಿ ಒಪ್ಪಿಗೆ ಕೇಳಲಾಗುವುದು ಎಂದು ತಿಳಿಸಲಾಗಿದೆ.

Post Comments (+)