ಹೊಸ ಹೂಡಿಕೆದಾರರನ್ನು ಆಕರ್ಷಿಸಲು ಜೆಟ್ ಏರ್‌ವೇಸ್ ವಿಫಲ

ಮುಂಬೈ: ಆರ್ಥಿಕವಾಗಿ ನಷ್ಟದಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಖರೀದಿಗೆ ಯಾವುದೇ ಹೊಸ ಹೂಡಿಕೆದಾರರು ಮುಂದೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಖರೀದಿ ಆಸಕ್ತಿ ತಿಳಿಸಲು ಮೂರನೇ ಬಾರಿಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಅದು ಆಗಸ್ಟ್ 31 ಅಂತ್ಯಗೊಂಡಿದೆ. ಈ ಅವಧಿಯಲ್ಲಿ ರಷ್ಯಾದ ಆರ್.ಎ ಪಾರ್ಟ್ನರ್ಸ್, ಪನಾಮಾ ಮೂಲದ ಹೂಡಿಕೆ ಸಂಸ್ಥೆ ಅವಂತುಲು ಗ್ರೂಪ್ ಮತ್ತು ದಕ್ಷಿಣ ಅಮೆರಿಕಾದ ಸಿನರ್ಜಿ ಗ್ರೂಪ್ ಕಾರ್ಪ್ ಬಿಡ್ ಸಲ್ಲಿಸಿವೆ.
ಇದನ್ನೂ ಓದಿ: ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ನಿವಾಸದಲ್ಲಿ ಇ.ಡಿ ಶೋಧ
ಆದರೆ ಹೊಸದಾಗಿ ಯಾವುದೇ ಹೂಡಿಕೆದಾರರು ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಮತ್ತೆ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿವೆ.
ಏಪ್ರಿಲ್ 17ರಂದು ಹಾರಾಟವನ್ನು ನಿಲ್ಲಿಸಿರುವ ಸಂಸ್ಥೆಯು ಸದ್ಯ, ದಿವಾಳಿ ಪ್ರಕ್ರಿಯೆಗೆ ಒಳಗಾಗಿದ್ದು ಸಂಸ್ಥೆಯು ₹ 26 ಸಾವಿರ ಕೋಟಿಗೂ ಅಧಿಕ ಮತ್ತದ ಸಾಲ ಬಾಕಿ ಉಳಿಸಿಕೊಂಡಿದೆ.
ಇದನ್ನೂ ಓದಿ: ಜೆಟ್ ಮಾರಾಟಕ್ಕೆ ಮತ್ತೆ ಹಿನ್ನಡೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.