ಮುಂಬೈ: ಜೆಟ್ ಏರ್‌ವೇಸ್ ವಿಮಾನಯಾನ ಕಂಪನಿಯು 2021ರ ಬೇಸಿಗೆಗೆ ಮುನ್ನ ಮತ್ತೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ ಎಂದು ಉದ್ಯಮಿ ಮುರಾರಿ ಲಾಲ್ ಜಲನ್ ಮತ್ತು ಲಂಡನ್ನಿನ ಕಲ್‌ರಾಕ್ ಕ್ಯಾಪಿಟಲ್ ಒಕ್ಕೂಟ ತಿಳಿಸಿದೆ. ಈ ಒಕ್ಕೂಟವು ಜೆಟ್ ಏರ್‌ವೇಸ್ ಕಂಪನಿಯ ಬಿಡ್ ಗೆದ್ದುಕೊಂಡಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮತ್ತು ಇತರ ಶಾಸನಾತ್ಮಕ ಸಂಸ್ಥೆಗಳಿಂದ ಅನುಮೋದನೆ, ನಾಗರಿಕ ವಿಮಾನಯಾನ ಸಚಿವಾಲಯದಿಂದ ಒಪ್ಪಿಗೆ ಸಿಗುವುದನ್ನು ಈ ಒಕ್ಕೂಟವು ಕಾಯುತ್ತಿದೆ. ನಾಗರಿಕ ವಿಮಾನಯಾನ ಸೇವೆಗಳು ಆರಂಭವಾದ ನಂತರ, ಸರಕು ಸಾಗಣೆ ಸೇವೆಗಳನ್ನೂ ಆರಂಭಿಸುವ ಆಲೋಚನೆ ಈ ಒಕ್ಕೂಟಕ್ಕೆ ಇದೆ.

ಜೆಟ್ ಏರ್‌ವೇಸ್ ಕಂಪನಿಗೆ ಸಾಲ ನೀಡಿದ ಸಂಸ್ಥೆಗಳ ಸಮಿತಿಯು, ಈ ಒಕ್ಕೂಟವು ಕಂಪನಿಯ ಪುನಶ್ಚೇತನಕ್ಕೆ ಸಲ್ಲಿಸಿದ ಯೋಜನೆಗೆ ಒಪ್ಪಿಗೆ ನೀಡಿದೆ. ಜೆಟ್ ಏರ್‌ವೇಸ್ ಕಂಪನಿಯಲ್ಲಿ ನಗದು ಬಿಕ್ಕಟ್ಟು ಉಂಟಾಗಿ, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.