ಶನಿವಾರ, ಡಿಸೆಂಬರ್ 14, 2019
25 °C

ದರ ಹೆಚ್ಚಳಕ್ಕೂ ಮುನ್ನ ಜಿಯೊ ₹444×4 ಆಲ್‌–ಇನ್‌–ಒನ್‌ ಪ್ಲಾನ್; 336 ದಿನಗಳ ಸೇವೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಿಯೊ ಆಲ್‌ ಇನ್‌ ಒನ್‌ ಪ್ಲಾನ್‌ ರಿಚಾರ್ಜ್

ಬೆಂಗಳೂರು: ಡಿಸೆಂಬರ್‌ 6ರಂದು ಪರಿಷ್ಕೃತ ಸೇವಾ ದರಗಳೊಂದಿಗೆ ಹೊಸ ಪ್ಲಾನ್‌ ಪರಿಚಯಿಸುವ ಮುನ್ನ 'ಜಿಯೊ' ತನ್ನ ಗ್ರಾಹಕರಿಗೆ ಮೇಲಿಂದ ಮೇಲೆ ನೋಟಿಫಿಕೇಷನ್‌ ಕಳಿಸುವ ಮೂಲಕ ಇಡೀ ವರ್ಷಕ್ಕೆ ಈಗಲೇ ರಿಚಾರ್ಜ್‌ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ₹444 ಪ್ಲಾನ್‌ ಬಗ್ಗೆ ಸಂದೇಶಗಳನ್ನು ರವಾನಿಸುತ್ತಿದೆ. 

ದರ ಏರುವ ಮುನ್ನವೇ ರಿಚಾರ್ಜ್‌ ಮಾಡಿಕೊಂಡು ಒಟ್ಟು 336 ದಿನಗಳ ವರೆಗೆ ಯಾವುದೇ ಅಡಚಣೆ ಇಲ್ಲದೆ ಕರೆ ಮತ್ತು ಡಾಟಾ ಸೇವೆ ಪಡೆದುಕೊಳ್ಳಬಹುದು ಎಂದು ಜಿಯೊ ತಿಳಿಸಿದೆ. ₹444×4 ಆಲ್‌ ಇನ್‌ ಒನ್‌ ಪ್ಲಾನ್‌ ಅಥವಾ ₹1,776 ಪ್ರೀಪೇಯ್ಡ್‌ ಪ್ಲಾನ್‌ನ್ನು ಜಿಯೊ ಬಳಕೆದಾರರ ಮುಂದಿಟ್ಟಿದೆ. 

₹444 ಪ್ಲಾನ್‌ನ ನಾಲ್ಕು ಬಾರಿ ರಿಚಾರ್ಜ್ ಬೆಲೆ ₹1,776 ಆಗುತ್ತದೆ. 84 ದಿನಗಳ ವರೆಗೂ ಕರೆ ಮತ್ತು ಡೇಟಾ ಸೇವೆಗಾಗಿ ₹444 ವಿಧಿಸಲಾಗಿದ್ದು, ನಾಲ್ಕು ರಿಚಾರ್ಜ್‌ಗಳನ್ನು ಒಟ್ಟಿಗೆ ಮಾಡಿಕೊಳ್ಳುವ ಮೂಲಕ 336 ದಿನ (84×4) ನಿರಂತರ ಸೇವೆ ಪಡೆಯಬಹುದಾಗಿದೆ.

ಇದನ್ನೂ ಓದಿ: ಜಿಯೊ ಹೊಸ ಪ್ಲಾನ್‌; ಏರ್‌ಟೆಲ್‌, ವೊಡಾಫೋನ್‌ಗಿಂತ ಶೇ 20ರಷ್ಟು ಅಗ್ಗ?

₹444×4 ಪ್ಲಾನ್‌; ಏನೆಲ್ಲ ಇದೆ? 

* ಜಿಯೊದಿಂದ ಜಿಯೊ ಸಂಖ್ಯೆಗಳಿಗೆ ಅನಿಯಮಿತ ಕರೆ

* ಜಿಯೊದಿಂದ ಇತರೆ ನೆಟ್‌ವರ್ಕ್‌ಗಳಿಗೆ 4000 ನಿಮಿಷಗಳ ಕರೆ

* ನಿತ್ಯ 2 ಜಿಬಿ ಡೇಟಾ

* ನಿತ್ಯ 100 ಎಸ್‌ಎಂಎಸ್‌ ಸಂದೇಶ ಉಚಿತ

* ಉಚಿತ ಜಿಯೊ ಅಪ್ಲಿಕೇಷನ್‌ ಸೌಲಭ್ಯ

ಹೊಸ ಆಲ್–ಇನ್‌–ಒನ್‌ ಪ್ಲಾನ್‌ ದರ ಶೇ 40ರಷ್ಟು ಹೆಚ್ಚಳಗೊಳ್ಳಲಿದೆ ಎಂದು ಜಿಯೊ ಈಗಾಗಲೇ ಪ್ರಕಟಿಸಿದೆ. ಅದರೊಂದಿಗೆ ಶೇ 300ರಷ್ಟು ಹೆಚ್ಚುವರಿ ಲಾಭವನ್ನೂ ಪಡೆಯಬಹುದು ಎಂದೂ ತಿಳಿಸಿದ್ದು, ಇದೀಗ ದರ ಹೆಚ್ಚಳಕ್ಕೂ ಮುನ್ನವೇ ಮೈಜಿಯೊ ಆ್ಯಪ್‌ ಅಥವಾ ಜಿಯೊ.ಕಾಮ್‌ ಮೂಲಕ ರಿಚಾರ್ಜ್ ಮಾಡಿಕೊಳ್ಳುವಂತೆ ಬಳಕೆದಾರರ ಬೆನ್ನತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ ಪ್ಲಾನ್‌ ಪೂರ್ಣಗೊಂಡ ಬಳಿಕವೇ ಹೊಸ ರಿಚಾರ್ಜ್‌ ಸೇವೆಗಳು ದೊರೆಯಲಿವೆ ಎಂದು ಕಂಪನಿ ತಿಳಿಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು