ನವದೆಹಲಿ: ಜಿಯೊ ಬ್ಲ್ಯಾಕ್ರಾಕ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಪ್ರೈವೆಟ್ ಲಿಮಿಟೆಡ್ನ ಅಂಗಸಂಸ್ಥೆಯಾದ ಜಿಯೊ ಬ್ಲ್ಯಾಕ್ರಾಕ್ ಬ್ರೋಕಿಂಗ್ ಪ್ರೈವೆಟ್ ಲಿಮಿಟೆಡ್, ಬ್ರೋಕರೇಜ್ ಸಂಸ್ಥೆಯಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಿಂದ (ಸೆಬಿ) ಅನುಮೋದನೆ ಪಡೆದುಕೊಂಡಿದೆ.

ಜಿಯೊ ಬ್ಲ್ಯಾಕ್ರಾಕ್ ಬ್ರೋಕಿಂಗ್, ಹೂಡಿಕೆದಾರರಿಗೆ ಕೈಗೆಟುಕುವ, ಪಾರದರ್ಶಕ ಮತ್ತು ತಂತ್ರಜ್ಞಾನ ಚಾಲಿತ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಜಿಯೊ ಬ್ಲ್ಯಾಕ್ರಾಕ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್, ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ (ಜೆಎಫ್ಎಸ್ಎಲ್) ಮತ್ತು ಅಮೆರಿಕದ ಬ್ಲ್ಯಾಕ್ರಾಕ್ ನಡುವಿನ ಜಂಟಿ ಉದ್ಯಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.