ಮಂಗಳವಾರ, ಮಾರ್ಚ್ 21, 2023
20 °C

ಜೂನ್‌ ತಿಂಗಳಲ್ಲಿ ಜಿಗಿದ ವಾಹನ ಮಾರಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಜೂನ್‌ ತಿಂಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಮಾರಾಟದಲ್ಲಿ ಹೆಚ್ಚಳ ಆಗಿದೆ ಎಂದು ಕಂಪನಿಗಳು ಹೇಳಿವೆ.

ಒಟ್ಟಾರೆ ಮಾರಾಟವು ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ತಿಳಿಸಿದೆ. ಮೇನಲ್ಲಿ 46,555 ವಾಹನಗಳು ಮಾರಾಟ ಆಗಿದ್ದವು. ಜೂನ್‌ನಲ್ಲಿ ಇದು 1.47 ಲಕ್ಷಕ್ಕೆ ಏರಿಕೆ ಆಗಿದೆ.

ಟಾಟಾ ಮೋಟರ್ಸ್‌ ಕಂಪನಿಯ ದೇಶಿ ಮಾರಾಟವು ಶೇ 78ರಷ್ಟು ಹೆಚ್ಚಾಗಿದ್ದು, 43,704ಕ್ಕೆ ವಾಹನಗಳನ್ನು ಕಂಪನಿ ಮಾರಾಟ ಮಾಡಿದೆ. ಹುಂಡೈ ಮೋಟರ್‌ ಇಂಡಿಯಾದ ವಾಹನಗಳ ಮಾರಾಟವು ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಶೇ 77ರಷ್ಟು ಹೆಚ್ಚಾಗಿದ್ದು, 54,474ಕ್ಕೆ ತಲುಪಿದೆ.

ಹೋಂಡಾ ಕಾರ್ಸ್‌ನ ದೇಶಿ ಸಗಟು ಮಾರಾಟವು 2,032ರಿಂದ 4,767ಕ್ಕೆ ಏರಿಕೆ ಕಂಡಿದೆ. ಟೊಯೊಟಾ ಕಂಪನಿಯು 8,801 ವಾಹನಗಳನ್ನು ಮಾರಾಟ ಮಾಡಿದ್ದು, ಮೇನಲ್ಲಿ ಆಗಿದ್ದ ಮಾರಾಟಕ್ಕೆ ಹೋಲಿಸಿದರೆ 13 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ಒಟ್ಟಾರೆ ವಾಹನ ಮಾರಾಟವು 17,447ರಿಂದ 32,964ಕ್ಕೆ ಏರಿಕೆ ಆಗಿದೆ. ಕಿಯಾ ಮೋಟರ್ಸ್ ಕಂಪನಿಯ ವಾಹನ ಮಾರಾಟ ಶೇ 36ರಷ್ಟು ಹೆಚ್ಚಾಗಿದ್ದು 15,015ಕ್ಕೆ ತಲುಪಿದೆ.

ದ್ವಿಚಕ್ರ ವಾಹನ ವಿಭಾಗದಲ್ಲಿ ಟಿವಿಎಸ್‌ ಮೋಟರ್‌ ಕಂಪನಿಯು 2.51 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು, ಮೇ ತಿಂಗಳಿಗೆ ಹೋಲಿಸಿದರೆ ಶೇ 51ರಷ್ಟು ಏರಿಕೆ ಕಂಡಿದೆ ಎಂದು ತಿಳಿಸಿದೆ.

ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಮಾರಾಟವು 27,294ರಿಂದ 43,048ಕ್ಕೆ ಏರಿಕೆ ಆಗಿದೆ. ಬಜಾಜ್‌ ಆಟೊ ಕಂಪನಿಯ ಒಟ್ಟಾರೆ ಮಾರಾಟ ಶೇ 24ರಷ್ಟು ಹೆಚ್ಚಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು