ಬುಧವಾರ, ಜುಲೈ 28, 2021
28 °C
ಹಣಕಾಸು ಸೇವೆಗಳನ್ನು ಒದಗಿಸುವ ಜೆಫ್ರೀಸ್‌ ಕಂಪನಿಯ ವರದಿ

ಕೋವಿಡ್‌: ವಾಹನೋದ್ಯಮದ ಗಳಿಕೆ ನೀರಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೋವಿಡ್‌ ಬಿಕ್ಕಟ್ಟಿನಿಂದಾಗಿ ದೇಶಿ ವಾಹನ ತಯಾರಿಕ ಕಂಪನಿಗಳ ಮಾರಾಟ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಜೂನ್‌ ತ್ರೈಮಾಸಿಕದಲ್ಲಿ ಕಂಪನಿಗಳ ಹಣಕಾಸು ಸಾಧನೆಯೂ ನೀರಸವಾಗಿರಲಿದೆ ಎಂದು ಹಣಕಾಸು ಸೇವಾ ಕಂಪನಿ ಜೆಫ್ರೀಸ್‌ ಹೇಳಿದೆ.

ಬಜಾಜ್‌ ಆಟೊ, ಮಾರುತಿ ಸುಜುಕಿ ಮತ್ತು ಟವಿಎಸ್‌ ಮೋಟರ್‌ ಮತ್ತು ಇನ್ನೂ ಕೆಲವು ಕಂಪನಿಗಳು ತಮ್ಮ ಮೂರನೇ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟಿಸಲಿವೆ.

ಮೊದಲ ತ್ರೈಮಾಸಿಕವು ವಾಹನ ಉದ್ಯಮ ಪಾಲಿಗೆ ಅತ್ಯಂತ ಕೆಟ್ಟ ತ್ರೈಮಾಸಿಕ ಆಗಲಿರಲಿದೆ ಎಂದು ಜೆಫ್ರೀಸ್‌ ಅಭಿಪ್ರಾಯಪಟ್ಟಿದೆ.

ಒರಿಜಿನಲ್‌ ಇಕ್ವಿಪ್‌ಮೆಂಟ್‌ ಮ್ಯಾನುಫ್ಯಾಕ್ಚರಿಂಗ್‌ (ಒಇಎಂ) ಕಂಪನಿಗಳಲ್ಲಿ ವರಮಾನವು ಜೂನ್‌ ತ್ರೈಮಾಸಿಕದಲ್ಲಿ ಶೇ 71ರಷ್ಟು ಕುಸಿತ ಕಾಣಲಿದೆ ಎಂದು ಅಂದಾಜು ಕಂಪನಿ ಮಾಡಿದೆ.

ಅಶೋಕ್‌ ಲೇಲ್ಯಾಂಡ್‌, ಬಜಾಜ್ ಆಟೊ, ಹೀರೊಮೊಟೊಕಾರ್ಪ್‌, ಮಾರುತಿ ಸುಜುಕಿ, ಈಶರ್‌ ಮೋಟರ್ಸ್‌, ಮಹೀಂದ್ರಾ, ಟಿವಿಎಸ್ ಮೋಟರ್‌, ಮದರ್‌ಸನ್‌ ಸುಮಿ ಮತ್ತು ಭಾರತ್‌ ಫೋರ್ಜ್‌ ಕಂಪನಿಗಳ ಸ್ಥಿತಿಯನ್ನು ಗಮನಿಸಿ ಜೆಫ್ರೀಸ್‌ ಕಂಪನಿ ತನ್ನ ವರದಿ ಸಿದ್ಧಪಡಿಸಿದೆ.

ಈ ಕಂಪನಿಗಳ ಗಳಿಕೆ (ಇಬಿಐಟಿಡಿಎ) ಕಡಿಮೆಯಾಗಲಿದೆ. ಅಶೋಲ್‌ ಲೇಲ್ಯಾಂಡ್‌ ಮತ್ತು ಮಾರುತಿ ಸುಜುಕಿ ಗಳಿಕೆಯು ನಕಾರಾತ್ಮಕವಾಗಿರಲಿದೆ. ಬಜಾಜ್‌, ಈಶರ್‌, ಹೀರೊ ಮೊಟೊಕಾರ್ಪ್‌, ಮಹೀಂದ್ರಾ ಮತ್ತು ಟಿವಿಎಸ್‌ ಗಳಿಕೆಯು ಸಕಾರಾತ್ಮಕವಾಗಿರಲಿದೆ ಎಂದೂ ಹೇಳಿದೆ.

ಬಜಾಜ್‌, ಹೀರೊ ಮತ್ತು ಮಹೀಂದ್ರಾ ಕಂಪನಿಗಳು ಲಾಭದಲ್ಲಿ ಇರಲಿವೆ. ಆದರೆ, ಮಾರುತಿ, ಈಶರ್‌, ಅಶೋಕ್‌, ಟಿವಿಎಸ್‌, ಭಾರತ್‌ ಫೋರ್ಜ್‌ ಮತ್ತು ಮದರ್‌ಸನ್‌ ಸುಮಿ ನಷ್ಟ ಅನುಭವಿಸಲಿವೆ ಎಂದು ವಿಶ್ಲೇಷಣೆ ಮಾಡಿದೆ.

ಸಗಟು ಮಾರಾಟ ಇಳಿಕೆ (ಜೂನ್‌ ತ್ರೈಮಾಸಿಕ)

74–78% – ಪ್ರಯಾಣಿಕ ಮತ್ತು ದ್ವಿಚಕ್ರ ವಾಹನ

93% – ಟ್ರಕ್‌

18–20% – ಟ್ರ್ಯಾಕ್ಟರ್‌

62% – ದ್ವಿಚಕ್ರವಾಹನ ರಫ್ತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು