ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒಗೆ ದಾಖಲೆ ಸಲ್ಲಿಸಿದ ಕೇನ್ಸ್‌

Last Updated 18 ಏಪ್ರಿಲ್ 2022, 12:53 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಮೂಲದ ಕೇನ್ಸ್‌ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 650 ಕೋಟಿ ಬಂಡವಾಳ ಸಂಗ್ರಹಿಸುವ ಉದ್ದೇಶದಿಂದ ಭಾರತೀಯ ಷೇರು‍ಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಕರಡು ದಾಖಲೆಪತ್ರ (ಡಿಆರ್‌ಎಚ್‌ಪಿ) ಸಲ್ಲಿಸಿದೆ.

ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕಾ ವಲಯದಲ್ಲಿ ಈ ಕಂಪನಿ ತೊಡಗಿಸಿಕೊಂಡಿದೆ. ಐಪಿಒ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರಿಗೆ ಶೇಕಡ 35ರಷ್ಟು ಷೇರುಗಳು ಲಭ್ಯವಿರಲಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ಸಂಗ್ರಹ ಆಗಲಿರುವ ಬಂಡವಾಳವನ್ನು ಕಂಪನಿಯು ಸಾಲ ಮರು‍ಪಾವತಿಸಲು, ಮೈಸೂರು ಮತ್ತು ಮಾನೇಸರದಲ್ಲಿ ಈಗ ಇರುವ ತಯಾರಿಕಾ ಘಟಕಗಳ ವಿಸ್ತರಣೆಗೆ, ಚಾಮರಾಜನಗರದಲ್ಲಿ ಹೊಸ ಘಟಕ ಆರಂಭಿಸಲು, ತನ್ನ ಅಂಗಸಂಸ್ಥೆಯಾದ ಕೇನ್ಸ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಹೂಡಿಕೆಗೆ, ಕಾರ್ಯಾಚರಣೆ ಬಂಡವಾಳದ ಅಗತ್ಯಗಳಿಗಾಗಿ ಹಾಗೂ ಇತರ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಿಕೊಳ್ಳಲಿದೆ ಎಂದು ಹೇಳಿದೆ.

2020–21ನೆಯ ಹಣಕಾಸು ವರ್ಷದಲ್ಲಿ ಕಂಪನಿಯು ₹ 9.73 ಕೋಟಿ ಲಾಭ ಗಳಿಸಿದೆ. 2021–22ನೆಯ ಹಣಕಾಸಿನ ವರ್ಷದಲ್ಲಿ ಡಿಸೆಂಬರ್ 31ರವರೆಗೆ ಕಂಪನಿಯು ₹ 21.82 ಕೋಟಿ ಲಾಭ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT