ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ 1ರಿಂದ ಕಿಯಾ ಕಾರಿನ ಬೆಲೆ ಏರಿಕೆ

Published 21 ಮಾರ್ಚ್ 2024, 16:03 IST
Last Updated 21 ಮಾರ್ಚ್ 2024, 16:03 IST
ಅಕ್ಷರ ಗಾತ್ರ

ನವದೆಹಲಿ: ಕಿಯಾ ಇಂಡಿಯಾ ಕಂಪನಿಯು ತನ್ನ ಎಲ್ಲಾ ಮಾದರಿಯ ವಾಹನಗಳ ಬೆಲೆಯನ್ನು ಶೇ 3ರಷ್ಟು ಹೆಚ್ಚಿಸುವುದಾಗಿ ಗುರುವಾರ ತಿಳಿಸಿದೆ.

ಏಪ್ರಿಲ್‌ 1ರಿಂದ ದರ ಹೆಚ್ಚಳವು ಜಾರಿಗೆ ಬರಲಿದೆ. ಸೆಲ್ಟೋಸ್‌, ಸಾನೆಟ್‌, ಕಾರೆನ್ಸ್‌ ಕಾರಿನ ಬೆಲೆ ಏರಿಕೆಯಾಗಲಿದೆ. 

‘ವಾಹನಗಳ ತಯಾರಿಕೆಯ ಕಚ್ಚಾ ಸಾಮಗ್ರಿಗಳ ದರ ಏರಿಕೆಯಾಗಿದೆ. ಇದರಿಂದ ಉತ್ಪಾದನಾ ವೆಚ್ಚವೂ ಏರುಗತಿಯಲ್ಲಿದೆ. ಈ ವೆಚ್ಚವನ್ನು ಭಾಗಶಃ ಸರಿದೂಗಿಸಬೇಕಿದೆ. ಹಾಗಾಗಿ, ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗದಂತೆ ಅಲ್ಪ ಪ್ರಮಾಣದಲ್ಲಿ ದರ ಏರಿಸಲು ತೀರ್ಮಾನಿಸಲಾಗಿದೆ’ ಎಂದು ಕಿಯಾ ಇಂಡಿಯಾ ಮುಖ್ಯಸ್ಥ ಹರ್‌ದೀಪ್‌ ಎಸ್‌. ಬರಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT