ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ದೋಷ: ಕಿಯಾ ಕಾರುಗಳನ್ನು ವಾಪಸ್‌ ಪಡೆದ ಕಂಪನಿ

Published 23 ಫೆಬ್ರುವರಿ 2024, 15:57 IST
Last Updated 23 ಫೆಬ್ರುವರಿ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ಕಿಯಾ ಸೆಲ್ಟೋಸ್‌ ಎಸ್‌ಯುವಿ ಪೆಟ್ರೋಲ್‌ ಮಾದರಿಯ ಕೆಲವು ಕಾರುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ದಕ್ಷಿಣ ಕೊರಿಯಾದ ಕಾರು ತಯಾರಕಾ ಕಂಪನಿ ಕಿಯಾ ಇಂಡಿಯಾ ತಿಳಿಸಿದೆ.

2023ರ ಫೆಬ್ರುವರಿ 28ರಿಂದ ಜುಲೈ 13ರ ನಡುವೆ ತಯಾರಿಸಿರುವ 4,358 ಕಾರುಗಳಲ್ಲಿನ ಎಲೆಕ್ಟ್ರಾನಿಕ್‌ ಆಯಿಲ್ ಪಂಪ್‌ ಕಂಟ್ರೋಲರ್‌ನಲ್ಲಿ ದೋಷ ಕಂಡುಬಂದಿದೆ. ಈ ಕಾರುಗಳನ್ನು ವಾಪಸ್‌ ಪಡೆದು ದೋಷ ಸರಿಪಡಿಸಿ ಮಾಲೀಕರಿಗೆ ಮರಳಿಸಲಾಗುವುದು ಎಂದು ಕಂಪನಿ ತಿಳಿಸಿದೆ.     

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕೂ ಮಾಹಿತಿ ನೀಡಲಾಗಿದೆ. ಗ್ರಾಹಕರ ಸುರಕ್ಷತೆಯೇ ಕಂಪನಿಯ ಆದ್ಯತೆಯಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT