ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು (ಕೆಐಒಸಿಎಲ್) ಕಂಪನಿಯು 2021-22 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ₹215.92 ಕೋಟಿ ಲಾಭ ಗಳಿಸಿದೆ.

ಕಾರ್ಯಾಚರಣೆಗಳಿಂದ ₹1,042.05 ಕೋಟಿ ಆದಾಯ ಗಳಿಸುವ ಮೂಲಕ ಶೇ 139 ಪ್ರಗತಿ ಸಾಧಿಸಿದೆ. ತೆರಿಗೆಗೆ ಮುಂಚಿನ ಲಾಭ ₹295.22 ಕೋಟಿಯಾಗಿದ್ದು, ತೆರಿಗೆ ನಂತರದ ಲಾಭ ₹215.92 ಕೋಟಿಯಾಗಿದೆ.

ಕಂಪನಿಯು ಈ ತ್ರೈಮಾಸಿಕದಲ್ಲಿ 6.03 ಲಕ್ಷ ಟನ್ ಕಬ್ಬಿಣದ ಉಂಡೆ ಉತ್ಪಾದಿಸಿದ್ದು, ಹಿಂದಿನ ವರ್ಷದ 1 ನೇ ತ್ರೈಮಾಸಿಕಕ್ಕಿಂತ ಶೇ 18 ರಷ್ಟು ವೃದ್ಧಿ ಸಾಧಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ 5.68 ಲಕ್ಷ ಕಬ್ಬಿಣ ಉಂಡೆ ಮಾರಾಟ ಮಾಡಿದ್ದು, ಈ ತ್ರೈಮಾಸಿಕದಲ್ಲಿ 6.31 ಲಕ್ಷ ಟನ್ ಮಾರಾಟ ಮಾಡುವ ಮೂಲಕ ಶೇ 11ರಷ್ಟು ಹೆಚ್ಚಳ ಕಂಡಿದೆ.

‘ಕೋವಿಡ್ -19 ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸಿದ ನಂತರ ಪೆಲೆಟ್ ಪ್ಲಾಂಟ್ ಆಪರೇಷನ್ಸ್ ಮತ್ತು ಮಿನರಲ್ ಎಕ್ಸ್‌ಪ್ಲೋರೇಶನ್ ಚಟುವಟಿಕೆಗಳನ್ನು ಗರಿಷ್ಠ ಮಟ್ಟದಲ್ಲಿ ಮಂದುವರಿಸಲು ಸಾಧ್ಯವಾಗಿದೆ. ರಫ್ತು ಮಾರುಕಟ್ಟೆಯಲ್ಲಿ ಕೆಐಒಸಿಎಲ್‌ನ ಅದಿರು ಉಂಡೆಗಳ ಬೆಲೆ ಬೆಲೆ ಏರಿಕೆಯಿಂದಾಗಿ ಹೆಚ್ಚಿನ ಲಾಭಾಂಶ ಪಡೆಯಲು ಸಾಧ್ಯವಾಗಿದೆ’ ಎಂದು ಕೆಐಒಸಿಎಲ್‌ನ ಪ್ರಭಾರ ಸಿಎಂಡಿ ಹಾಗೂ ಹಣಕಾಸು ನಿರ್ದೇಶಕ ಸ್ವಪನ್‌ಕುಮಾರ್ ಗೊರೈ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.