ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆಗೆ ಕಿರಾಣಿ ಅಂಗಡಿಗಳ ಹೆಚ್ಚಿದ ಒಲವು

ಅರ್ನೆಸ್ಟ್‌ ಆ್ಯಂಡ್‌ ಯಂಗ್‌ ಸಮೀಕ್ಷೆ
Last Updated 6 ಜುಲೈ 2020, 11:59 IST
ಅಕ್ಷರ ಗಾತ್ರ

ನವದೆಹಲಿ: ನಗರಗಳಲ್ಲಿನ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಲು ಕೋವಿಡ್‌ ಪಿಡುಗಿನ ಅಡಚಣೆ ಮುಂದುವರೆದಿರುವಾಗ ದಿನಬಳಕೆಯ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಯಲ್ಲಿ ನೆರೆಹೊರೆಯಲ್ಲಿನ ಬಹುತೇಕ ಕಿರಾಣಿ ಅಂಗಡಿಗಳು ತಂತ್ರಜ್ಞಾನ ಅಳವಡಿಕೆಗೆ ಒಲವು ತೋರಿಸುತ್ತಿವೆ.

ಸಲಹಾ ಸಂಸ್ಥೆ ಅರ್ನೆಸ್ಟ್‌ ಆ್ಯಂಡ್‌ ಯಂಗ್‌, ದೇಶದ 12 ನಗರಗಳಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ವಹಿವಾಟು ನಿರ್ವಹಣೆ ಮತ್ತು ವಿಸ್ತರಣೆಗೆ ತಂತ್ರಜ್ಞಾನವು ಮಾಲೀಕರ ನೆರವಿಗೆ ಬರುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿಯೇ ಸರಕುಗಳ ಖರೀದಿ, ಪೂರೈಕೆ ಮತ್ತು ಗ್ರಾಹಕರಿಗೆ ಮಾರಾಟ ವಿಷಯದಲ್ಲಿ ತಂತ್ರಜ್ಞಾನದ ನೆರವು ಪಡೆಯುವುದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಶೇ 40ರಷ್ಟು ಕಿರಾಣಿ ಅಂಗಡಿ ಮಾಲೀಕರು ಹೇಳಿದ್ದಾರೆ. ಸರಕುಗಳ ನಿರಂತರ ಪೂರೈಕೆ ಮತ್ತು ಗ್ರಾಹಕರಿಗೆ ವಿತರಣೆಗೆ ಆನ್‌ಲೈನ್‌ ಸೌಲಭ್ಯದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಮುಂದಾಗಿರುವುದಾಗಿ ಶೇ 20ರಷ್ಟು ಮಾಲೀಕರು ಹೇಳಿದ್ದಾರೆ.

ಬಿಕ್ಕಟ್ಟಿನ ದಿನಗಳಲ್ಲಿನ ಬದಲಾದ ಪರಿಸ್ಥಿತಿ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆ ನಿರ್ವಹಣೆಗೆ ಕಿರಾಣಿ ಅಂಗಡಿ ಮಾಲೀಕರು ಡಿಜಿಟಲ್‌ ಪಾವತಿ ಅಳವಡಿಕೆ ಮತ್ತು ವಹಿವಾಟಿನ ಒಟ್ಟಾರೆ ಸ್ವರೂಪದ ಬದಲಾವಣೆಗೆ ಮನಸ್ಸು ಮಾಡಿದ್ದಾರೆ. ತಂತ್ರಜ್ಞಾನ ಕುರಿತ ಅವರಲ್ಲಿನ ಅಸಡ್ಡೆ ಧೋರಣೆಯೂ ಬದಲಾಗಿದೆ. ಸಣ್ಣ ಮತ್ತು ದೊಡ್ಡ ಕಿರಾಣಿ ಅಂಗಡಿಗಳ ಮಾಲೀಕರ ಸಂದರ್ಶನ ನಡೆಸಿ ಸಿದ್ಧಪಡಿಸಿದ ವರದಿಯಲ್ಲಿ ಈ ವಿವರಗಳಿವೆ.

ಗ್ರಾಹಕರಿಗೆ ಸರಕುಗಳ ಬೇಡಿಕೆಗೆ ಚಾಟ್‌ ಆ್ಯಪ್‌, ಸಂಪರ್ಕರಹಿತ ಸರಕು ವಿತರಣೆ ಮತ್ತು ಪಾವತಿಗೆ ಡಿಜಿಟಲ್‌ ಮಾಧ್ಯಮ ಬಳಕೆ ಹೆಚ್ಚುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT