ಬೆಂಗಳೂರು: ಲಲಿತಾ ಜ್ಯುವೆಲ್ಲರಿ ಅಧ್ಯಕ್ಷ ಎಂ.ಕಿರಣ್ ಕುಮಾರ್ ಅವರು ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಅವರನ್ನು ಸನ್ಮಾನಿಸಿದ್ದಾರೆ.

ಪದ್ಮಾ ಅವರು ರಸ್ತೆಯಲ್ಲಿ ಬಿದ್ದಿದ್ದ 45 ಸವರನ್ (ಸುಮಾರು 360 ಗ್ರಾಂ) ಚಿನ್ನಾಭರಣವನ್ನು ತಮಿಳುನಾಡು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದರು. ಹೀಗಾಗಿ, ಕಿರಣ್ ಕುಮಾರ್ ಅವರು ಪ್ರಾಮಾಣಿಕತೆ ಮೆರೆದ ಪದ್ಮಾ ಅವರನ್ನು ಚೆನ್ನೈನಲ್ಲಿರುವ ತಮ್ಮ ಮನೆಗೆ ಆಹ್ವಾನಿಸಿ ಸನ್ಮಾನಿಸಿದರು.

‘ಪ್ರಾಮಾಣಿಕತೆ ಮೆರೆದ ಪದ್ಮಾರಂತಹ ಜನರು ನಮ್ಮ ಸಮಾಜಕ್ಕೆ ಮಾದರಿ ವ್ಯಕ್ತಿಗಳು. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಕಿರಣ್ ಕುಮಾರ್ ಹೇಳಿದರು.

ಈ ವೇಳೆ ಪದ್ಮಾ ಅವರಿಗೆ ಮೆಚ್ಚುಗೆಯ ಸಂಕೇತವಾಗಿ ಬೆಳ್ಳಿ ತಟ್ಟೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.