ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕರ ಷೇರು ಪಾಲು ಹೆಚ್ಚಳ: ಎಲ್‌ಐಸಿಗೆ ಕಾಲಾವಕಾಶ

Published 15 ಮೇ 2024, 15:15 IST
Last Updated 15 ಮೇ 2024, 15:15 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕರ ಷೇರು ಪಾಲನ್ನು ಶೇ 10ರಷ್ಟು ಹೆಚ್ಚಿಸಿಕೊಳ್ಳಲು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ), ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೆಚ್ಚುವರಿಯಾಗಿ ಮೂರು ವರ್ಷದವರೆಗೆ ಕಾಲಾವಕಾಶ ನೀಡಿದೆ.

ಸದ್ಯ ಎಲ್‌ಐಸಿಯಲ್ಲಿ ಕೇಂದ್ರ ಸರ್ಕಾರವು ಶೇ 96.50ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದ್ದರೆ, ಸಾರ್ವಜನಿಕರ ಪಾಲು ಶೇ 3.50ರಷ್ಟಿದೆ.

‘ಷೇರುಪೇಟೆಗೆ ಸೇರ್ಪಡೆಯಾದ (ಲಿಸ್ಟಿಂಗ್‌) ಎರಡು ವರ್ಷದೊಳಗೆ ನಿಗಮವು ಶೇ 10ರಷ್ಟು ಇಕ್ವಿಟಿ ಷೇರುಗಳಲ್ಲಿ ಸಾರ್ವಜನಿಕರ ಪಾಲಿದೆ ಎಂಬ ಬಗ್ಗೆ ಖಚಿತಪಡಿಸಬೇಕಿದೆ. ಆದರೆ, ಈ ಗುರಿಯನ್ನು ತಲುಪಿಲ್ಲ. ಹಾಗಾಗಿ, 2027ರ ಮೇ 16ರ ವರೆಗೆ ಕಾಲಾವಕಾಶ ನೀಡಿದೆ’ ಎಲ್‌ಐಸಿ ತಿಳಿಸಿದೆ.

ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿಯು, 2022ರ ಮೇ 17ರಂದು ಷೇರುಪೇಟೆಗೆ ಸೇರ್ಪಡೆಯಾಗಿತ್ತು. ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಮೂಲಕ ಕೇಂದ್ರವು ಎಲ್‌ಐಸಿಯ 22.13 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ₹20,557 ಕೋಟಿ ಬಂಡವಾಳ ಸಂಗ್ರಹಿಸಿದೆ. ಪ್ರತಿ ಷೇರಿಗೆ ₹902ರಿಂದ ₹949 ಬೆಲೆ ನಿಗದಿಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT