ಸೋಮವಾರ, ನವೆಂಬರ್ 29, 2021
20 °C

ಎಲ್‌ಐಸಿಯಿಂದ ಬಚತ್ ಪ್ಲಸ್ ಪಾಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಥಿಕ ರಕ್ಷಣೆ ಹಾಗೂ ಉಳಿತಾಯದ ಸೌಲಭ್ಯ ಒದಗಿಸುವ ‘ಬಚತ್ ಪ್ಲಸ್’ ವಿಮಾ ಪಾಲಿಸಿಗೆ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಚಾಲನೆ ನೀಡಿದೆ.

ಇದು ಐದು ವರ್ಷಗಳ ಅವಧಿಯ ಪಾಲಿಸಿ. ಈ ವಿಮೆಯ ಅವಧಿ ಪೂರ್ಣಗೊಂಡ ನಂತರ ಪಾಲಿಸಿದಾರರಿಗೆ ನಿರ್ದಿಷ್ಟ ಮೊತ್ತ ಸಿಗಲಿದೆ ಅಥವಾ ಪಾಲಿಸಿ ಹೊಂದಿರುವವರು ಪಾಲಿಸಿಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಹಣಕಾಸಿನ ನೆರವು ಸಿಗಲಿದೆ ಎಂದು ಎಲ್‌ಐಸಿ ತಿಳಿಸಿದೆ.

‘ಸಾವಿನ ನಂತರ ಸಿಗಬೇಕಿರುವ ಮೊತ್ತ ಎಷ್ಟು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದರಲ್ಲಿದೆ. ಇದನ್ನು ಎಲ್‌ಐಸಿ ವೆಬ್‌ಸೈಟ್‌ ಮೂಲಕ ಅಥವಾ ಎಲ್‌ಐಸಿ ಏಜೆಂಟರ ಮೂಲಕ ಖರೀದಿಸಬಹುದು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು