ಬೆಂಗಳೂರು:ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸುವ ‘ವಿಶೇಷ ನವೀಕರಣ ಅಭಿಯಾನ’ ಆರಂಭಿಸಿದೆ.

ರದ್ದಾಗಿರುವ ವೈಯಕ್ತಿಕ ಯೋಜನೆಗಳಿಗೆ ಇದು ಅನ್ವಯಿಸಲಿದೆ. ಸೋಮವಾರದಿಂದ ಅಕ್ಟೋಬರ್ 22ರವರೆಗೆ ಈ ಅಭಿಯಾನ ನಡೆಯಲಿದೆ.

ನಿರ್ದಿಷ್ಟ ಅರ್ಹ ಯೋಜನೆಗಳ ಪಾಲಿಸಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು, ಮೊದಲ ಬಾರಿಗೆ ಪಾವತಿಸದೇ ಇರುವ ಪ್ರೀಮಿಯಂ ದಿನಾಂಕದಿಂದ ಐದು ವರ್ಷಗಳ ಒಳಗೆ ನವೀಕರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಟರ್ಮ್ ಅಶ್ಯೂರೆನ್ಸ್ ಮತ್ತು ಹೈ ರಿಸ್ಕ್ ಪ್ಲಾನ್ಗಳನ್ನು ಹೊರತುಪಡಿಸಿ,ಪಾವತಿಸಿದೇ ಇರುವ ಒಟ್ಟು ಪ್ರೀಮಿಯಂ ಪರಿಗಣಿಸಿ ವಿಳಂಬ ಶುಲ್ಕದಲ್ಲಿರಿಯಾಯಿತಿ ನೀಡಲಾಗುತ್ತದೆ. ಅರ್ಹ ಆರೋಗ್ಯ ಮತ್ತು ಕಿರು ವಿಮಾ ಯೋಜನೆಗಳು ವಿಳಂಬ ಶುಲ್ಕದಲ್ಲಿ ರಿಯಾಯಿತಿ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.