ಗುರುವಾರ , ಅಕ್ಟೋಬರ್ 21, 2021
28 °C

ಎಲ್‌ಪಿಜಿ ದರ: 3 ತಿಂಗಳಲ್ಲಿ ₹ 90 ಹೆಚ್ಚಳ, ಬೆಂಗಳೂರಲ್ಲಿ ಎಷ್ಟಿದೆ? ಇಲ್ಲಿದೆ ದರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಬ್ಸಿಡಿ ಇರುವ ಮತ್ತು ಸಬ್ಸಿಡಿ ಇಲ್ಲದ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು 14.2 ಕೆ.ಜಿ.ಯ ಸಿಲಿಂಡರ್‌ಗೆ ₹ 15ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 902ಕ್ಕೆ ಏರಿಕೆ ಆಗಿದೆ.

ಜುಲೈನಿಂದ ಈಚೆಗೆ ನಾಲ್ಕು ಬಾರಿ ಎಲ್‌ಪಿಜಿ ದರ ಏರಿಕೆ ಮಾಡಿದಂತಾಗಿದೆ. ಜುಲೈನಲ್ಲಿ ಪ್ರತಿ ಸಿಲಿಂಡರ್‌ಗೆ ₹ 25ರಷ್ಟು, ಆಗಸ್ಟ್‌ನಲ್ಲಿ ₹ 25 ಮತ್ತು ಸೆಪ್ಟೆಂಬರ್‌ನಲ್ಲಿ ₹ 25ರಷ್ಟು ಹೆಚ್ಚಿಸಲಾಗಿತ್ತು. ಈಗ ಆಗಿರುವ ದರ ಹೆಚ್ಚಳವನ್ನೂ ಪರಿಗಣಿಸಿದರೆ, ಜುಲೈ ನಂತರ ಒಟ್ಟು ₹ 90ರಷ್ಟು ಏರಿಕೆ ಆದಂತಾಗಿದೆ.

ಪೆಟ್ರೋಲ್‌, ಡೀಸೆಲ್ ದರ ಏರಿಕೆ: ಸರ್ಕಾರಿ ಸ್ವಾಮ್ಯ ತೈಲ ಮಾರಾಟ ಕಂಪನಿಗಳು ಬುಧವಾರ ಪೆಟ್ರೋಲ್‌ ದರ 30 ಪೈಸೆ ಮತ್ತು ಡೀಸೆಲ್‌ ದರ 35 ಪೈಸೆ ಹೆಚ್ಚಿಸಿವೆ. ಈಚಿನ ವಾರಗಳಲ್ಲಿ ಗರಿಷ್ಠ ಮಟ್ಟದ ದರ ಏರಿಕೆ ಇದಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ಕಂಪನಿಗಳು ದೇಶದಲ್ಲಿ ತೈಲೋತ್ಪನ್ನಗಳ ದರದಲ್ಲಿ ಹೆಚ್ಚಳ ಮಾಡಿವೆ.

ಬುಧವಾರ ದರ ಹೆಚ್ಚಳದಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹ 106.47 ಮತ್ತು ಡೀಸೆಲ್‌ ದರ ₹ 96.97ಕ್ಕೆ ಏರಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 102.94 ಮತ್ತು ಡೀಸೆಲ್‌ ದರ ₹ 91.42ಕ್ಕೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು