ಮಂಗಳವಾರ, ಅಕ್ಟೋಬರ್ 26, 2021
21 °C

ರಾಜಾಜಿನಗರದಲ್ಲಿ ಗ್ಲೋಬಲ್‌ ಮಾಲ್ ಉದ್ಘಾಟನೆ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಹುರಾಷ್ಟ್ರೀಯ ಉದ್ಯಮ ಸಮೂಹವಾಗಿರುವ ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌ ಒಡೆತನದ ರಾಜಾಜಿನಗರದಲ್ಲಿನ ಗ್ಲೋಬಲ್‌ ಮಾಲ್ ಅನ್ನು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಅವರು ಸೋಮವಾರ ಉದ್ಘಾಟಿಸಿದರು.

ಬೆಂಗಳೂರಿನ ಅತಿದೊಡ್ಡ ಹೈಪರ್‌ಮಾರ್ಕೆಟ್ ಆಗಿರುವ ಲುಲು ಹೈಪರ್‌ಮಾರ್ಕೆಟ್ ಹಾಗೂ ವಿನೂತನ ಮನರಂಜನಾ ತಾಣ ಫಂಟುರಾ ಇಲ್ಲಿದೆ ಎಂದು ಕಂಪನಿಯು ತಿಳಿಸಿದೆ.

‘ಭಾರತದಲ್ಲಿ ಯವುದೇ ಯೋಜನೆಯಾದರೂ ನಮಗೆ ವಿಶೇಷವಾಗಿರುತ್ತದೆ. ಬೆಂಗಳೂರಿನ ನಿವಾಸಿಗಳಿಗೆ ವಿಶ್ವ ದರ್ಜೆಯ ಶಾಪಿಂಗ್‌ ಅನುಭವ ನೀಡುವ ಸಲುವಾಗಿ ನಮ್ಮ ಅಂತರರಾಷ್ಟ್ರೀಯ ಪರಿಣತಿಯನ್ನು ಅಳವಡಿಸಿಕೊಳ್ಳಲಾಗಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಖರೀದಿಸುವ ಜೊತೆಗೆ ಸ್ನೇಹಪರ ಸೇವೆಯೂ ಇಲ್ಲಿ ಇರಲಿದೆ ಎಂದು ಲುಲು ಸಮೂದ ಸಿಎಂಡಿ ಎಂ.ಎ. ಯೂಸುಫ್‌ ಅಲಿ ಅವರು ಹೇಳಿದರು.

ಈ ಹೈಪರ್‌ ಮಾರ್ಕೇಟ್‌ನಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶವನ್ನು ಹೆಚ್ಚಿಸಲು, ಕರ್ನಾಟಕ ಆಧಾರಿತ ಕೃಷಿ ಮತ್ತು ವ್ಯಾಪಾರ ವಲಯಗಳನ್ನು ಬೆಂಬಲಿಸಲು ಉತ್ತಮ ಉತ್ತೇಜಿಜಸಲು ವಿಶೇಷ ವಿಭಾಗಗಳನ್ನು ಹೊಂದಿದ್ದೇವೆ ಎಂದು ಅವರು ವಿವರಿಸಿದರು.

ರಾಜಾಜಿನಗರದಲ್ಲಿನ 14 ಎಕರೆ ಜಾಗದಲ್ಲಿ ಇದು ನಿರ್ಮಾಣ ಆಗಿದೆ. ಐದು ಮಹಡಿಗಳ ಈ ಮಾಲ್‌ನಲ್ಲಿ 132 ಅಂಗಡಿಗಳು, 17 ಕಿಯೋಸ್ಕ್‌ಗಳು ಇವೆ. ಸಿದ್ಧ ಉಡುಪುಗಳು, ಆಭರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ರೆಸ್ಟಾರೆಂಟ್‌ಗಳು, ಕೆಫೆಗಳನ್ನು ಹೊಂದಿದೆ. ಲುಲು ಹೈಪರ್‌ಮಾರ್ಕೆಟ್‌ 2 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿದೆ ಹಾಗೂ ಅತಿದೊಡ್ಡ ಒಳಾಂಗಣ ಮನರಂಜನಾ ಕೇಂದ್ರವಾದ ಫಂಟುರಾ 60 ಸಾವಿರ ಚದರ ಅಡಿಯಲ್ಲಿ ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು