ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ ವ್ಯತ್ಯಾಸ: ಮುಂಗಡ ಬುಕ್ಕಿಂಗ್ ಅವಕಾಶ

ಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ಘೋಷಣೆ
Last Updated 4 ಫೆಬ್ರುವರಿ 2020, 19:19 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುವ ಹಿನ್ನೆಲೆಯಲ್ಲಿಮಲಬಾರ್ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ಮುಂಗಡ ಬುಕ್ಕಿಂಗ್ ಕೊಡುಗೆ ಘೋಷಿಸಿದ್ದು, ಗ್ರಾಹಕರಿಗೆ ಚಿನ್ನಾಭರಣದ ದರದಲ್ಲಿ ಆಯ್ಕೆಯನ್ನು ನೀಡಲಾಗಿದೆ.

2021ರ ಜನವರಿ 1ರಿಂದ ‌ಹಾಲ್‍ಮಾರ್ಕ್ ಹೊಂದಿರುವ ಚಿನ್ನವನ್ನು ಮಾತ್ರ ಮಾರಾಟ ಮಾಡಬೇಕೆಂದು ಕೇಂದ್ರ ಸರ್ಕಾರ ನಿಬಂಧನೆ ಹಾಕಿದೆ. 20 ವರ್ಷಗಳಿಂದಲೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಹಾಲ್‍ಮಾರ್ಕ್ ಇರುವ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದೆ. ಈಗ ಹಾಲ್‌ಮಾರ್ಕ್‌ ಹೊಂದಿರದ ಹಳೆಯ ಚಿನ್ನವನ್ನೂ ಹೊಸ ಚಿನ್ನಾಭರಣಗಳೊಂದಿಗೆ ವಿನಿಮಯ ಅಥವಾ ಮಾರಾಟ ಮಾಡುವ ಅವಕಾಶವನ್ನು ಸಂಸ್ಥೆ ನೀಡಿದೆ. ಆಯಾ ದಿನದ ಮಾರುಕಟ್ಟೆ ಬೆಲೆ ಅನ್ವಯವಾಗಲಿದೆ.

‘ದೇಶದಾದ್ಯಂತ ಚಿನ್ನಕ್ಕೆ ಒಂದೇ ರೀತಿಯ ಬೆಲೆಯನ್ನು ನಿಗದಿಪಡಿಸಬೇಕು.ಈ ದಿಸೆಯಲ್ಲಿ ಸರ್ಕಾರವು ಆಭರಣ ತಯಾರಕರು ಮತ್ತು ಮಾರಾಟಗಾರರ ಸಂಘದ ಸಹಯೋಗದಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳಬೇಕು. ಗ್ರಾಹಕರು ತಮ್ಮ ಚಿನ್ನಾಭರಣಗಳನ್ನು ವಿನಿಮಯ ಮಾಡುವಾಗ ಅಥವಾ ಮಾರಾಟ ಮಾಡುವಾಗ ಅವರಿಗೆ ಉತ್ತಮ ಮೌಲ್ಯ ಸಿಗುವಂತೆ ಖಾತರಿಪಡಿಸುವುದು ಮುಖ್ಯ. ಚಿನ್ನದ ಕಳ್ಳಸಾಗಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಿದರೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುವುದು ಹೆಚ್ಚಾಗುತ್ತದೆ. ಸರ್ಕಾರವು ಗಮನಾರ್ಹ ಪ್ರಮಾಣದಲ್ಲಿ ಆಮದು ಸುಂಕವನ್ನು ಕಡಿಮೆ ಮಾಡಿದರೆ ಈ ಕಳ್ಳಸಾಗಣೆಯನ್ನು ನಿಯಂತ್ರಣಕ್ಕೆ ತರಬಹುದು’ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯ ಅಧ್ಯಕ್ಷ ಎಂ.ಪಿ.ಅಹ್ಮದ್ ಮಾತನಾಡಿ, ‘ಚಿನ್ನದ ಬೆಲೆ ಪ್ರತಿದಿನ ಬದಲಾವಣೆ ಆಗುತ್ತಿದೆ. ಡಾಲರ್‌ ವಿನಿಮಯ ದರದಲ್ಲಿ ವ್ಯತ್ಯಾಸವಾಗುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ದರ ಏರಿಕೆಯ ಹೊರೆಯನ್ನು ತಪ್ಪಿಸಿಕೊಳ್ಳಲು ಗ್ರಾಹಕರು ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬುಕ್ಕಿಂಗ್‌ ಮಾಡಿದ ದಿನ ಅಥವಾ ಖರೀದಿ ಮಾಡುವ ದಿನದ ದರದ ಆಯ್ಕೆಯೂ ಗ್ರಾಹಕರಿಗೆ ನೀಡಿದ್ದೇವೆ’ ಎಂದರು.

‘ಗ್ರಾಹಕರು ಖರೀದಿಸಿದ ಚಿನ್ನಾಭರಣಗಳಿಗೆ ಒಂದು ವರ್ಷದವರೆಗೆ ಉಚಿತ ವಿಮೆ, ಮರಳಿ ಖರೀದಿಸುವ ಖಾತರಿಯನ್ನೂ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT