ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ₹1 ಸಾವಿರ ಕೋಟಿ ಹೂಡಿಕೆ: ಮಲಬಾರ್‌

Published 30 ಸೆಪ್ಟೆಂಬರ್ 2023, 15:56 IST
Last Updated 30 ಸೆಪ್ಟೆಂಬರ್ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ ಕಂಪನಿಯು ಮಹಾರಾಷ್ಟ್ರದಲ್ಲಿ 2024–25ರಲ್ಲಿ ₹1 ಸಾವಿರ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದ್ದು, ಇದರಿಂದಾಗಿ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದೆ.

ಭಾರತದಲ್ಲಿ ಕೇಂದ್ರೀಕೃತ ಕಾರ್ಯಾಚರಣೆ ನಡೆಸಲು ಅನುಕೂಲ ಆಗುವಂತೆ ಮುಂಬೈನಲ್ಲಿ ‘ಮಲಬಾರ್‌ ನ್ಯಾಷನಲ್‌ ಹಬ್‌’ ಆರಂಭಿಸುವ ವೇಳೆ ಕಂಪನಿಯು ಈ ಘೋಷಣೆ ಮಾಡಿದೆ. ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಈ ಕೆಂದ್ರವನ್ನು ಉದ್ಘಾಟಿಸಿದರು.

ಭವಿಷ್ಯದ ಬೆಳವಣಿಗೆಗೆ ಈ ಕೇಂದ್ರವು ತಳಹದಿ ಆಗಲಿದೆ ಎಂದು ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ. ಅಹಮದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT