ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪಾಲ್ ತೆಕ್ಕೆಗೆ ಸೇರಿದ ಕೊಲಂಬಿಯಾ ಏಷ್ಯಾ

Last Updated 30 ಏಪ್ರಿಲ್ 2021, 13:28 IST
ಅಕ್ಷರ ಗಾತ್ರ

ನವದೆಹಲಿ: ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್‌ ಸಮೂಹದ ಭಾರತದಲ್ಲಿನ ಆಸ್ಪತ್ರೆಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಆರೋಗ್ಯಸೇವಾ ವಲಯದ ಪ್ರಮುಖ ಕಂಪನಿಯಾದ ‘ಮಣಿಪಾಲ್ ಹಾಸ್ಪಿಟಲ್ಸ್‌’ ಶುಕ್ರವಾರ ತಿಳಿಸಿದೆ.

ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್‌ನ ಶೇಕಡ 100ರಷ್ಟು ಷೇರುಗಳನ್ನು ಮಣಿಪಾಲ್ ಹಾಸ್ಪಿಟಲ್ಸ್‌ ಖರೀದಿಸಿದೆ. ಈ ಖರೀದಿಯೊಂದಿಗೆ ಮಣಿಪಾಲ್ ಹಾಸ್ಪಿಟಲ್ಸ್ ಸಮೂಹವು ಭಾರತದ ಎರಡನೆಯ ಅತಿದೊಡ್ಡ ಮಲ್ಟಿ–ಸ್ಪೆಷಾಲಿಟಿ ಆಸ್ಪತ್ರೆಗಳ ಸಮೂಹವಾಗಿ ಹೊರಹೊಮ್ಮಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಆರೋಗ್ಯಸೇವಾ ವಲಯದ ಈ ಎರಡು ಸಂಸ್ಥೆಗಳು (ಮಣಿಪಾಲ್ ಮತ್ತು ಕೊಲಂಬಿಯಾ ಏಷ್ಯಾ) ಒಂದಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇವೆ’ ಎಂದು ಮಣಿಪಾಲ್ ಶಿಕ್ಷಣ ಮತ್ತು ಆರೋಗ್ಯ ಸಮೂಹದ ಅಧ್ಯಕ್ಷ ರಂಜನ್ ಪೈ ಹೇಳಿದ್ದಾರೆ.

ಎರಡೂ ಕಂಪನಿಗಳನ್ನು ಒಗ್ಗೂಡಿಸಿದರೆ 14 ನಗರಗಳಲ್ಲಿ ಒಟ್ಟು ಏಳು ಸಾವಿರ ಹಾಸಿಗೆಗಳ ಸಾಮರ್ಥ್ಯದ 26 ಆಸ್ಪತ್ರೆಗಳು, ನಾಲ್ಕು ಸಾವಿರಕ್ಕೂ ಹೆಚ್ಚಿನ ವೈದ್ಯರು ಇದ್ದಾರೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT