ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆ ಜನವರಿ ತಿಂಗಳಿನಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ಸೋಮವಾರ ತಿಳಿಸಿದೆ.

ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯು ನಿರ್ವಹಿಸುವ ‘ಎಚ್ಎಸ್ಬಿಸಿ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ’ವು (ಪಿಎಂಐ) 2025ರ ಡಿಸೆಂಬರ್ನಲ್ಲಿ 55ರಷ್ಟಿತ್ತು. ಜನವರಿಯಲ್ಲಿ ಅದು 55.4ಕ್ಕೆ ಏರಿಕೆ ಆಗಿದೆ ಎಂದು ಹೇಳಿದೆ.

ಈ ಸೂಚ್ಯಂಕವು 50ರ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತವೆಂದು ಕಾಣಲಾಗುತ್ತದೆ.

‘ಉತ್ಪನ್ನಗಳಿಗೆ ಹೊಸ ಕಾರ್ಯಾದೇಶ ಹೆಚ್ಚಳವಾಗಿದೆ. ಜೊತೆಗೆ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಏರಿಕೆಯಾಗಿದೆ. ಇದರಿಂದ ತಯಾರಿಕಾ ವಲಯದ ಚಟುವಟಿಕೆ ಚೇತರಿಕೆ ಕಂಡಿದೆ’ ಎಂದು ಎಚ್ಎಸ್ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.

ಬೇಡಿಕೆಯಲ್ಲಿ ಹೆಚ್ಚಳ, ಹೊಸ ವ್ಯವಹಾರಗಳ ಬೆಳವಣಿಗೆ ಮತ್ತು ಹೂಡಿಕೆಯು ಉತ್ಪಾದನೆಗೆ ಬೆಂಬಲ ನೀಡಿದವು. ಒಟ್ಟಾರೆ ಮಾರಾಟಕ್ಕೆ ದೇಶೀ ಮಾರುಕಟ್ಟೆಯು ಉತ್ತೇಜನ ನೀಡಿದೆ. ಆದರೆ, ಹೊಸ ರಫ್ತು ವ್ಯವಹಾರದ ಹೆಚ್ಚಳ ಜಾಸ್ತಿ ಇಲ್ಲ. ಏಷ್ಯಾ, ಆಸ್ಟ್ರೇಲಿಯಾ, ಕೆನಡಾ, ಯುರೋಪ್ ಮತ್ತು ಪಶ್ಚಿಮ ಏಷ್ಯಾದಿಂದ ಬೇಡಿಕೆ ಉತ್ತಮವಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.