ಭಾನುವಾರ, ಜುಲೈ 25, 2021
22 °C
ದೋಷಪೂರಿತ ಇಂಧನ ಪಂಪ್ ಕಾರಣ

1.34 ಲಕ್ಷ ವ್ಯಾಗನ್-ಆರ್, ಬಲೆನೊ ಕಾರುಗಳನ್ನು ವಾಪಸ್ ಪಡೆಯಲಿದೆ ಮಾರುತಿ

ಪಿಟಿಐ Updated:

ಅಕ್ಷರ ಗಾತ್ರ : | |

The logo of Maruti Suzuki India. Credit: Reuters

ನವದೆಹಲಿ: ದೂಷಪೂರಿತ ಇಂಧನ ಪಂಪ್‌ಗಳನ್ನು ಪರಿಶೀಲಿಸಿ ಹೊಸದನ್ನು ಅಳವಡಿಸುವ ಸಲುವಾಗಿ 1.34 ಲಕ್ಷ ವ್ಯಾಗನ್-ಆರ್ ಮತ್ತು ಬಲೆನೊ ಕಾರುಗಳನ್ನು ವಾಪಸ್ ಪಡೆಯುವುದಾಗಿ ‘ಮಾರುತಿ ಸುಜುಕಿ ಇಂಡಿಯಾ’ ಬುಧವಾರ ತಿಳಿಸಿದೆ.

2018ರ ನವೆಂಬರ್ 15ರಿಂದ 2019ರ ಅಕ್ಟೋಬರ್ 15ರ ಅವಧಿಯಲ್ಲಿ ತಯಾರಿಸಲಾದ ವ್ಯಾಗನ್-ಆರ್ ಮತ್ತು 2019ರ ಜನವರಿ 8ರಿಂದ 2019 ನವೆಂಬರ್ 4ರ ಅವಧಿಯಲ್ಲಿ ತಯಾರಿಸಲಾದ ಬಲೆನೊ (ಪೆಟ್ರೋಲ್) ಕಾರುಗಳನ್ನು ಸ್ವಯಂಪ್ರೇರಿತವಾಗಿ ವಾಪಸ್ ಪಡೆಯುವುದಾಗಿ ಕಂಪನಿ ಪ್ರಕಟಣೆ ತಿಳಿಸಿದೆ. ಎರಡೂ ಮಾದರಿಯ 1,34,885 ಕಾರುಗಳನ್ನು ವಾಪಸ್ ಪಡೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ವ್ಯಾಗನ್-ಆರ್‌ ಮಾದರಿಯ 56,663 ಕಾರುಗಳು ಮತ್ತು ಬಲೆನೊ ಮಾದರಿಯ 78,222 ಕಾರುಗಳ ಇಂಧನ ಪಂಪ್‌ಗಳಲ್ಲಿರುವ ಸಮಸ್ಯೆ ಬಗ್ಗೆ ಪರಿಶೀಲಿಸಲಾಗುವುದು. ದೋಷಪೂರಿತ ಪಂಪ್‌ಗಳನ್ನು ಬದಲಿಸಲಾಗುವುದು’ ಎಂದು ಕಂಪನಿ ಹೇಳಿದೆ.

ದೋಷಪೂರಿತ ಪಂಪ್‌ ಹೊಂದಿದೆ ಎಂಬ ಅನುಮಾನವಿರುವ ಕಾರಿನ ಮಾಲೀಕರನ್ನು ಕಂಪನಿಯ ಅಧಿಕೃತ ಡೀಲರ್‌ಗಳು ಸಂಪರ್ಕಿಸಲಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು