ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ–ಕ್ಯಾಪ್‌ ₹71 ಸಾವಿರ ಕೋಟಿ ಹೆಚ್ಚಳ

Published 10 ಮಾರ್ಚ್ 2024, 14:56 IST
Last Updated 10 ಮಾರ್ಚ್ 2024, 14:56 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವಾರ ದೇಶದ ಪ್ರಮುಖ 10 ಕಂಪನಿಗಳ ಪೈಕಿ ಏಳು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ₹71,301 ಕೋಟಿಗೆ ಏರಿಕೆಯಾಗಿದೆ. 

ಕಳೆದ ವಾರ ಮುಂಬೈ ಷೇರುಪೇಟೆ ಸೂಚ್ಯಂಕ ಶೇ 0.50ರಷ್ಟು ಏರಿಕೆಯಾಗಿದ್ದರಿಂದ ಕಂಪನಿಗಳು ಗಳಿಕೆ ಕಂಡಿವೆ. 

ಭಾರ್ತಿ ಏರ್‌ಟೆಲ್‌ ₹38,726 ಕೋಟಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ₹13,476 ಕೋಟಿ, ಎಚ್‌ಡಿಎಫ್‌ಸಿ ₹12,243 ಕೋಟಿ, ಐಸಿಐಸಿಐ ₹3,099 ಕೋಟಿ, ಐಟಿಸಿ ₹1,469 ಕೋಟಿ, ಟಿಸಿಎಸ್‌ ₹1,157 ಕೋಟಿ ಹಾಗೂ ಹಿಂದುಸ್ತಾನ್‌ ಯೂನಿಲಿವರ್‌ ₹1,127 ಕೋಟಿ ಗಳಿಕೆ ಕಂಡಿವೆ.

ಇನ್ಪೊಸಿಸ್‌ ₹15,875 ಕೋಟಿ, ರಿಲಯನ್ಸ್ ಇಂಡಸ್ಟ್ರೀಸ್‌ ₹15,391 ಕೋಟಿ ಹಾಗೂ ಎಲ್‌ಐಸಿ ಮಾರುಕಟ್ಟೆಯ ಮೌಲ್ಯ ₹6,166 ಕೋಟಿ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT