ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಕಂಪನಿಗಳ ಎಂ–ಕ್ಯಾಪ್‌ ₹1.67 ಲಕ್ಷ ಕೋಟಿ ಇಳಿಕೆ

Published 21 ಜನವರಿ 2024, 12:51 IST
Last Updated 21 ಜನವರಿ 2024, 12:51 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ 5 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ಕಳೆದ ವಾರ ₹1.67 ಲಕ್ಷ ಕೋಟಿ ಇಳಿಕೆ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಅತಿಹೆಚ್ಚು ನಷ್ಟ ಕಂಡ ಕಂಪನಿಯಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಕಳೆದ ವಾರ 1,144 ಅಂಶದಷ್ಟು (ಶೇ 1.57) ಕುಸಿದಿದೆ. 

ರಿಲಯನ್ಸ್‌ ಇಂಡಸ್ಟ್ರೀಸ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌), ಎಚ್‌ಡಿಎಫ್‌ಸಿ ಬ್ಯಾಂಕ್‌, ಹಿಂದೂಸ್ತಾನ್‌ ಯೂನಿಲಿವರ್‌ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ನಷ್ಟ ದಾಖಲಿಸಿವೆ. ಐಸಿಐಸಿಐ ಬ್ಯಾಂಕ್‌, ಇನ್ಫೊಸಿಸ್‌, ಭಾರ್ತಿ ಏರ್‌ಟೆಲ್‌, ಎಲ್‌ಐಸಿ ಮತ್ತು ಐಟಿಸಿ ಲಾಭ ಕಂಡಿವೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ₹18,199 ಕೋಟಿ, ಹಿಂದೂಸ್ತಾನ್‌ ಯೂನಿಲಿವರ್‌ ₹17,845 ಕೋಟಿ, ಟಿಸಿಎಸ್‌ ₹7,720 ಕೋಟಿ ಮತ್ತು ಎಸ್‌ಬಿಐ ₹2,008 ಕೋಟಿಯಷ್ಟು ಇಳಿಕೆ ಕಂಡಿವೆ. 

ಎಲ್‌ಐಸಿ ₹67,456 ಕೋಟಿ, ಭಾರ್ತಿ ಏರ್‌ಟೆಲ್‌ ₹26,380 ಕೋಟಿ, ಇನ್ಪೊಸಿಸ್‌ ₹15,170 ಕೋಟಿ, ಐಸಿಐಸಿಐ ಬ್ಯಾಂಕ್‌ ₹3,163 ಕೋಟಿ ಮತ್ತು ಐಟಿಸಿ ₹2,058 ಕೋಟಿಯಷ್ಟು ಮಾರುಕಟ್ಟೆ ಮೌಲ್ಯ ಹೆಚ್ಚಳವಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಡಿಸೆಂಬರ್‌ ತ್ರೈಮಾಸಿಕದಲ್ಲಿ ಗಳಿಸಿದ ಲಾಭವು ಹೂಡಿಕೆದಾರರನ್ನು ಆಕರ್ಷಿಸುವಷ್ಟು ಇರಲಿಲ್ಲ. ಹಾಗಾಗಿ ಶುಕ್ರವಾರದವರೆಗೆ ಸತತ ಮೂರು ದಿನ ಬ್ಯಾಂಕ್‌ನ ಷೇರು ಮೌಲ್ಯ ಶೇ 12ರಷ್ಟು ಕುಸಿದಿದೆ. ಆದರೆ, ಶನಿವಾರ ಸ್ವಲ್ಪ ಮಟ್ಟಿನ ಚೇತರಿಕೆ ಕಂಡಿದೆ. ಶೇ 0.54ರಷ್ಟು ಏರಿಕೆ ಆಗಿದೆ. 

10 ಕಂಪನಿಗಳ ಪೈಕಿ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಮೌಲ್ಯಯುತ ಸಂಸ್ಥೆ ಎಂಬ ಹೆಗ್ಗಳಿಕೆ ಮುಂದುವರಿದಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಇನ್ಫೊಸಿಸ್‌, ಭಾರ್ತಿ ಏರ್‌ಟೆಲ್‌, ಎಲ್‌ಐಸಿ, ಐಟಿಸಿ, ಹಿಂದೂಸ್ತಾನ್‌ ಯೂನಿಲಿವರ್‌ ಮತ್ತು ಎಸ್‌ಬಿಐ ಇವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT