ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಗಳನ್ನು ಮುಚ್ಚಿ, ಉದ್ಯೋಗ ಕಡಿತಕ್ಕೆ ಮುಂದಾದ ಮೆಕ್‌ಡೊನಾಲ್ಡ್ಸ್‌

Last Updated 3 ಏಪ್ರಿಲ್ 2023, 11:23 IST
ಅಕ್ಷರ ಗಾತ್ರ

ಖ್ಯಾತ ಬರ್ಗರ್‌ ಕಂಪನಿ ಮೆಕ್‌ಡೊನಾಲ್ಡ್ಸ್‌ ತನ್ನ ಅಮೆರಿಕ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಕಂಪನಿ ತನ್ನ ವಿಸ್ತಾರವಾದ ಮರುನಿರ್ಮಾಣದ ಅಂಗವಾಗಿ, ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಹೀಗಾಗಿ, ಕಚೇರಿಗಳನ್ನು ಮುಚ್ಚಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ.

ಈ ಬಗ್ಗೆ ಅಮೆರಿಕದ ಉದ್ಯೋಗಿಗಳಿಗೆ ಕಂಪನಿ ಇ–ಮೇಲ್‌ ರವಾನಿಸಿದ್ದು, ಸೋಮವಾರದಿಂದ ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದೆ. ವರ್ಚ್ಯುವಲ್ ಆಗಿಯೇ ಉದ್ಯೋಗಿಗಳ ವಜಾ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎನ್ನುವ ಉದ್ದೇಶದಿಂದ ವರ್ಕ್‌ ಫ್ರಂ ಹೋಮ್‌ ನೀಡಲಾಗಿದೆ. ಆದರೆ ಉದ್ಯೋಗಿಗಳ ವಜಾ ಪ್ರಕ್ರಿಯೆ ಯಾವ ರೀತಿ ಇರಲಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.

‘ಏಪ್ರಿಲ್ 3 ರಿಂದ ಆರಂಭವಾಗುವ ವಾರದಲ್ಲಿ, ಸಂಸ್ಥೆಯ ಸಿಬ್ಬಂದಿಗಳ ಪಾತ್ರಗಳ ಬಗ್ಗೆ ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರ ಮಾಡಲಾಗುವುದು‘ ಕಂಪನಿ ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್‌ನಲ್ಲಿ ಹೇಳಲಾಗಿದೆ.

ಇದರ ಜತೆಗೆ ಈಗಾಗಲೇ ನಿಗದಿಯಾಗಿರುವ ಮುಖತಃ ಸಭೆಗಳನ್ನು ರದ್ದು ಮಾಡಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT