ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಕಾರ್‌ಗಳ ಬಿಡುಗಡೆ ಯೋಜನೆಯಲ್ಲಿ ಬದಲಿಲ್ಲ: ಮರ್ಸಿಡಿಸ್‌ ಬೆಂಜ್‌

Last Updated 17 ಜೂನ್ 2020, 12:34 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌ನಿಂದಾಗಿ ಮಾರುಕಟ್ಟೆ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಿದ್ದರೂಈ ವರ್ಷ ಭಾರತದಲ್ಲಿ 10 ಹೊಸ ಕಾರ್‌ಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ‌ ಮಾರ್ಟಿನ್ ಶ್ವೆಂಕ್‌ ತಿಳಿಸಿದ್ದಾರೆ.

ಬುಧವಾರಹೊಸ ಅವತರಣಿಕೆಯ ಜಿಎಲ್‌ಎಸ್‌‌ ಎಸ್‌ಯುವಿ ಬಿಡುಗಡೆ ಮಾಡಿರುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದೆ.ಈ ವರ್ಷದಲ್ಲಿ ಕಂಪನಿ ಬಿಡುಗಡೆ ಮಾಡಿರುವ ಏಳನೇ ವಾಹನ ಇದಾಗಿದೆ.

‘ಕೋವಿಡ್‌ ಬಿಕ್ಕಟ್ಟಿನಿಂದ ಮಾರುಕಟ್ಟೆ ಮೇಲಾಗಿರುವ ಪರಿಣಾಮವು ತಾತ್ಕಾಲಿವಾಗಿದೆ. ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳದೇ ಇದ್ದರೂ ಒಂದಷ್ಟು ಬದಲಾವಣೆಯಂತೂ ಆಗಲಿದೆ. ಹೀಗಾಗಿ, ಕಂಪನಿಯು ಈ ವರ್ಷಕ್ಕೆ ಹಾಕಿಕೊಂಡಿರುವ ಯೋಜನೆಗಳಂತೆಯೇ ಮುಂದುವರಿಯಲಿದೆ.

‘ಮಾರಾಟವು ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಗ್ರಾಹಕರ ವಿಶ್ವಾಸ ಮರಳಿ ಗಳಿಸಿಕೊಳ್ಳಲು ಇನ್ನೂ ಹೆಚ್ಚಿನ ಪರಿಶ್ರಮದ ಅಗತ್ಯವಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಜಿಎಲ್‌ಸಿಯಲ್ಲಿ ಇದುವರೆಗೆ 6,700 ಕಾರ್‌ಗಳನ್ನು ಮಾರಾಟ ಮಾಡಲಾಗಿದೆ. ಹೊಸ ಜಿಎಲ್‌ಸಿ ಅತ್ಯಂತ ಐಷಾರಾಮಿ ಎಸ್‌ಯುವಿ ಆಗಿದ್ದು, ಕಂಪನಿಯ ಎಸ್‌ಯುವಿ ವಿಭಾಗದ ಬಹುಮುಖ್ಯ ಆಧಾರವಾಗಿ ಮುಂದುವರಿಯಲಿದೆ.

‘ಮರ್ಸಿಡಿಸ್‌ ಮಿ ಕನೆಕ್ಟ್‌ ಆ್ಯಪ್‌ ಹಲವು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜಿಯೊ ಫೆನ್ಸಿಂಗ್‌, ವೆಹಿಕಲ್‌ ಫೈಂಡರ್‌ ಮತ್ತು ರಿಮೋಟ್‌ ಓಪನ್ –ಕ್ಲೋಸ್‌ ಆಫ್‌ ವಿಂಡೋಸ್‌ ಆ್ಯಂಡ್‌ ಸನ್‌ರೂಫ್‌ ಆಯ್ಕೆಗಳನ್ನು ಶೀಘ್ರವೇ ಅಳವಡಿಸಲಾಗುವುದು’ ಎಂದು ಹೇಳಿದ್ದಾರೆ.

ಜಿಎಲ್‌ಸಿ 400 ಡಿ 4ಮ್ಯಾಟಿಕ್‌ ಪೆಟ್ರೋಲ್‌ ಹಾಗೂ ಜಿಎಲ್‌ಎಸ್‌ 450 4ಮ್ಯಾಟಿಕ್‌ ಡೀಸೆಲ್‌ ಮಾದರಿಯ ಎಕ್ಸ್‌ ಷೋರೂಂ ಬೆಲೆ ₹ 99.9 ಲಕ್ಷ ಇದೆ.

ಸುರಕ್ಷತಾ ವೈಶಿಷ್ಟ್ಯ

ಆ್ಯಕ್ಟಿವ್‌ ಪಾರ್ಕ್‌ ಅಸಿಸ್ಟ್‌. 360 ಡಿಗ್ರಿ ಸರೌಂಡ್‌ ವೀವ್‌ ಕ್ಯಾಮೆರಾ

ಬ್ಲೈಂಡ್‌ ಸ್ಪಾಟ್‌ ಅಸಿಸ್ಟ್‌

ಬ್ರೇಕ್‌ ಅಸಿಸ್ಟ್‌

9 ಏರ್‌ಬ್ಯಾಗ್‌

ಡೌನ್‌ಹಿಲ್‌ ಸ್ಪೀಡ್‌ ರೆಗ್ಯುಲೇಷನ್

ಆಫ್‌ ರೋಡ್‌ ಎಬಿಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT