ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 11,000 ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ

Last Updated 11 ಮಾರ್ಚ್ 2023, 4:46 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಎರಡನೇ ಹಂತದ ಉದ್ಯೋಗ ಕಡಿತಕ್ಕೆ ಕೈಹಾಕಿರುವ ಮೆಟಾ (ಫೇಸ್‌ಬುಕ್‌) ಶೇಕಡಾ 13 ರಷ್ಟು ಅಥವಾ ಸುಮಾರು 11,000 ಉದ್ಯೋಗಿಗಳನ್ನು ವಜಾ ಮಾಡಲಿದೆ. ಮುಂದಿನ ವಾರದಿಂದ ಆರಂಭವಾಗಲಿರುವ ಈ ವಜಾ ಪ್ರಕ್ರಿಯೆಯಲ್ಲಿ ಎಂಜಿನಿಯರಿಂಗ್‌ ಅಲ್ಲದ ಉದ್ಯೋಗಿಗಳು ತೀವ್ರ ಹೊಡೆತ ಅನುಭವಿಸಲಿದ್ದಾರೆ.

ಅನೇಕ ಸುತ್ತುಗಳಲ್ಲಿ ಹೆಚ್ಚುವರಿ ವಜಾ ಮಾಡಲು ಮೆಟಾ ಯೋಜಿಸುತ್ತಿದೆ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಮಾಧ್ಯಮ ‘ದಿ ವಾಲ್ ಸ್ಟ್ರೀಟ್ ಜರ್ನಲ್‌’ ವರದಿ ಪ್ರಕಟಿಸಿದೆ.

ಕಳೆದ ವರ್ಷದಂತೆಯೇ ಈ ಬಾರಿಯೂ ಶೇಕಡಾ 13ರಷ್ಟು ಸಿಬ್ಬಂದಿಯನ್ನು ಮೆಟಾ ವಜಾ ಮಾಡಲಿದೆ ಎಂದು ವರದಿ ಹೇಳಿದೆ.

‍‘ಈ ಕಡಿತಗಳೊಂದಿಗೆ ಕಂಪನಿಯು ಕೆಲವು ಯೋಜನೆಗಳನ್ನು ಮತ್ತು ತಂಡಗಳನ್ನು ರದ್ದು ಮಾಡುವ ಸಾಧ್ಯತೆಗಳಿವೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫೇಸ್‌ಬುಕ್‌ ಸಂಸ್ಥೆಯ 18 ವರ್ಷಗಳ ಇತಿಹಾಸದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಉದ್ಯೋಗಿಗಳನ್ನು ತೆಗೆದುಹಾಕಲಾಗಿತ್ತು. ಮೆಟಾದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಶೇ 13ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಇದು ಅಮೆರಿಕದ ಐಟಿ ಕಂಪನಿಗಳಲ್ಲೇ ಅತಿದೊಡ್ಡ ಉದ್ಯೋಗನಷ್ಟ ಎನಿಸಿಕೊಂಡಿತ್ತು.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT