ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರು ಸಾಲ ನೀಡಿಕೆ ಶೇ 27ರಷ್ಟು ಹೆಚ್ಚಳ

ಸಕ್ರಿಯ ಸಾಲಗಳ ಸಂಖ್ಯೆ: ಕರ್ನಾಟಕ ಮುಂಚೂಣಿ
Published 12 ಜೂನ್ 2024, 0:05 IST
Last Updated 12 ಜೂನ್ 2024, 0:05 IST
ಅಕ್ಷರ ಗಾತ್ರ

ಮುಂಬೈ: 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಕಿರು ಹಣಕಾಸು ಸಂಸ್ಥೆಗಳಿಂದ ಕಿರು ಸಾಲ ನೀಡಿಕೆಯು ಶೇ 27ರಷ್ಟು ಏರಿಕೆಯಾಗಿದೆ ಎಂದು ಕ್ರೆಡಿಟ್‌ ಮಾಹಿತಿ ನೀಡುವ ಕಂಪನಿ ಕ್ರಿಫ್ ಹೈ ಮಾರ್ಕ್‌ ತಿಳಿಸಿದೆ.

ಕಳೆದ ಹಲವು ತ್ರೈಮಾಸಿಕಗಳಿಂದ ಸಾಲ ನೀಡಿಕೆಯು ಸ್ಥಿರವಾಗಿತ್ತು. ಮಾರ್ಚ್‌ ತ್ರೈಮಾಸಿಕದಲ್ಲಿ ಸಾಲದ ಬಾಕಿ ಪ್ರಮಾಣವು ಏರಿಕೆಯಾಗಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

ಈ ತ್ರೈಮಾಸಿಕದಲ್ಲಿ ₹4.42 ಲಕ್ಷ ಕೋಟಿ ಸಾಲ ನೀಡಲಾಗಿದೆ. ಒಟ್ಟು ಸಾಲದ ಬಂಡವಾಳ ಪ್ರಮಾಣದಲ್ಲಿ ಶೇ 27ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಈ ಪ್ರಮಾಣವು ಶೇ 8.5ರಷ್ಟಿತ್ತು ಎಂದು ತಿಳಿಸಿದೆ.

ಒಟ್ಟಾರೆ ಸಾಲದಲ್ಲಿ 10 ರಾಜ್ಯಗಳ ಪಾಲು ಶೇ 83.5ರಷ್ಟಿದೆ. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. 31 ದಿನಗಳಿಂದ 180 ದಿನಗಳ ಅವಧಿ ಮೀರಿದ ಸಾಲಗಳ ಬಾಕಿ ಉಳಿಸಿಕೊಂಡ ಮೊತ್ತದ ಅನುಪಾತವು ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 2ರಷ್ಟಿತ್ತು. ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 2.1ಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದೆ.

ಹಣಕಾಸು ಸಂಸ್ಥೆಗಳಿಂದ ಸಾಲ ಮಂಜೂರಾತಿಗೆ ಅನುಮೋದನೆ ಹಾಗೂ ಸಾಲಗಾರರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ಸಾಲಗಳನ್ನು ‘ಸಕ್ರಿಯ ಸಾಲ’ಗಳೆಂದು ಪರಿಗಣಿಸಲಾಗುತ್ತದೆ.

ಇಂತಹ ಸಕ್ರಿಯ ಸಾಲ ಹೊಂದಿರುವ ಸಾಲಗಾರರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಅಲ್ಲದೆ, ಶೇ 12ರಷ್ಟು ಮಂದಿ ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚು ಸಕ್ರಿಯ ಸಾಲಗಳನ್ನು ಪಡೆದಿದ್ದಾರೆ. ಗರಿಷ್ಠ ಸಕ್ರಿಯ ಸಾಲಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವರದಿ ತಿಳಿಸಿದೆ.

ಕಿರು ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲಗಳ ಪೈಕಿ ಚಿನ್ನದ ಸಾಲವು ಜನರ ಪ್ರಧಾನ ಆಯ್ಕೆಯಾಗಿದೆ. ಒಟ್ಟು ₹35,679 ಕೋಟಿ ಸಾಲ ನೀಡಲಾಗಿದ್ದು, 41.2 ಲಕ್ಷ ಸಕ್ರಿಯ ಸಾಲಗಳಿವೆ.   

ಸಾಲ ನೀಡಿಕೆಯಲ್ಲಿ ಬ್ಯಾಂಕೇತರ ಹಣಕಾಸಿನ ಕಂಪನಿಗಳು ಮತ್ತು ಕಿರು ಹಣಕಾಸು ಸಂಸ್ಥೆಗಳ ಪಾಲು ಶೇ 39.2ರಷ್ಟಿದೆ. ಬ್ಯಾಂಕ್‌ಗಳು ಶೇ 33.2ರಷ್ಟು ಹಾಗೂ ಸಣ್ಣ ಹಣಕಾಸು ಸಂಸ್ಥೆಗಳು ಶೇ 16.9ರಷ್ಟು ಪಾಲು ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT