ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೊಸಾಫ್ಟ್‌: ಜಿಡಿಸಿ ಮುಖ್ಯಸ್ಥೆಯಾಗಿ ಅಪರ್ಣಾ ನೇಮಕ

Published 21 ನವೆಂಬರ್ 2023, 14:14 IST
Last Updated 21 ನವೆಂಬರ್ 2023, 14:14 IST
ಅಕ್ಷರ ಗಾತ್ರ

ನವದೆಹಲಿ: ಮೈಕ್ರೊಸಾಫ್ಟ್‌ ಕಂಪನಿಯ ಗ್ಲೋಬಲ್‌ ಡೆಲಿವರಿ ಸೆಂಟರ್‌ನ (ಜಿಡಿಸಿ) ಮುಖ್ಯಸ್ಥೆಯಾಗಿ ಅಪರ್ಣಾ ಗುಪ್ತಾ ಅವರ ನೇಮಕವಾಗಿದೆ ಎಂದು ಕಂಪನಿ ತಿಳಿಸಿದೆ.

ಆರು ವರ್ಷಗಳ ಹಿಂದೆ ಅಪರ್ಣಾ ಅವರು ಕಮರ್ಷಿಯಲ್‌ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ನ (ಪ್ರಸ್ತುತ ಐಎಸ್‌ಇ) ಭಾರತದ ಮುಖ್ಯಸ್ಥೆಯಾಗಿ ಮೈಕ್ರೊಸಾಫ್ಟ್‌ ಸೇರಿದ್ದರು. ಈ ವೇಳೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕ ಕೇಂದ್ರಿತ ಯೋಜನೆಗಳನ್ನು ರೂಪಿಸಲು ಮತ್ತು ಮೈಕ್ರೊಸಾಫ್ಟ್‌ನಲ್ಲಿ ಹೂಡಿಕೆ ಮಾಡುವವರ ಮೌಲ್ಯವನ್ನು ಹೆಚ್ಚಿಸಲು ಅಪರ್ಣಾ ಅವರ ಅನುಭವವು ನೆರವಿಗೆ ಬರಲಿದೆ ಎಂದು ಮೈಕ್ರೊಸಾಫ್ಟ್ ಇಂಡಿಯಾದ ಅಧ್ಯಕ್ಷ ಪುನೀತ್ ಚಂದೋಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT