ಸಾಫ್ಟ್ವೇರ್ ದೈತ್ಯ ಮೈಕ್ರೋಸಾಫ್ಟ್ ಈ ವರ್ಷ ಉದ್ಯೋಗಿಗಳ ವೇತನ ಹೆಚ್ಚಿಸದೇ ಇರಲು ಹಾಗೂ ಬೋನಸ್ ಹಾಗೂ ಸ್ಟಾಕ್ ಅವಾರ್ಡ್ಗಳಿಗೆ ಬಜೆಟ್ ಕಡಿತಗೊಳಿಸಲು ನಿರ್ಧರಿಸಿದೆ.

ಉದ್ಯೋಗಿಗಳಿಗೆ ಸಿಇಒ ಸತ್ಯ ನಾದೆಳ್ಲಾ ಅವರು ಮಾಡಿರುವ ಆಂತರಿಕ ಇ–ಮೇಲ್, ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ಲಭ್ಯವಾಗಿದ್ದು, ಅದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯೆ ಬಯಸಿ ಮೈಕ್ರೋಸಾಫ್ಟ್ ಅನ್ನು ಸಂಪರ್ಕಿಸಿದರೂ, ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

‘ಕಳೆದ ವರ್ಷ, ನಾವು ಮಾರುಕಟ್ಟೆಯ ಪರಿಸ್ಥಿತಿಗಳು ಮತ್ತು ಕಂಪನಿಯ ಕಾರ್ಯಕ್ಷಮತೆಯಿಂದ ಗಮನಾರ್ಹ ಹೂಡಿಕೆಯನ್ನು ಮಾಡಿದ್ದೇವೆ. ನಮ್ಮ ಜಾಗತಿಕ ಅರ್ಹತೆಯ ಬಜೆಟ್ ಅನ್ನು ದ್ವಿಗುಣಗೊಳಿಸಿದ್ದೇವೆ. ಆದರೆ ಈ ವರ್ಷ ಆರ್ಥಿಕ ಪರಿಸ್ಥಿತಿಗಳು ಹಲವು ಆಯಾಮಗಳಲ್ಲಿ ವಿಭಿನ್ನವಾಗಿವೆ‘ ಎಂದು ನಾದೆಳ್ಲಾ ಅವರು ಇ–ಮೇಲ್ನಲ್ಲಿ ಹೇಳಿದ್ದಾರೆ.

ಇದೇ ವರ್ಷ ಜನವರಿ ತಿಂಗಳಿನಲ್ಲಿ ಸುಮಾರು 10,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಮೈಕ್ರೋಸಾಫ್ಟ್ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.