ಮೈಕ್ರೊಸಾಫ್ಟ್‌ನಲ್ಲಿ 10 ಸಾವಿರ ಉದ್ಯೋಗ ಕಡಿತ

ದಾವೋಸ್/ಬೆಂಗಳೂರು: 2023ರ ಅಂತ್ಯದೊಳಗೆ ಒಟ್ಟು 10 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಮೈಕ್ರೊಸಾಫ್ಟ್ ತಿಳಿಸಿದೆ. ಇದು ಅಮೆರಿಕದ ತಂತ್ರಜ್ಞಾನ ಉದ್ಯಮ ವಲಯದಲ್ಲಿ ನೌಕರರ ವಜಾ ಪ್ರಕ್ರಿಯೆಗಳು ವೇಗ ಪಡೆಯುತ್ತಿರುವುದರ ಸೂಚನೆಯಾಗಿದೆ.
ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲ ಅವರು ಕಂಪನಿಯ ನೌಕರರಿಗೆ ಬರೆದಿರುವ ಟಿಪ್ಪಣಿಯಲ್ಲಿ, ‘ಗ್ರಾಹಕರು ತಮ್ಮ ಡಿಜಿಟಲ್ ವೆಚ್ಚಗಳನ್ನು ಹೆಚ್ಚು ಪರಿಣಾಮಕಾರಿ ಆಗಿಸಲು ಬಯಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಕೆಲಸಗಳನ್ನು ಅವರು ಬಯಸುತ್ತಿದ್ದಾರೆ. ಜಗತ್ತಿನ ಕೆಲವು ಪ್ರದೇಶಗಳಲ್ಲಿ ಆರ್ಥಿಕ ಹಿಂಜರಿತ ಇದೆ, ಇನ್ನು ಕೆಲವು ಪ್ರದೇಶಗಳು ಹಿಂಜರಿತ ಎದುರಾಗುವ ನಿರೀಕ್ಷೆಯಲ್ಲಿರುವ ಕಾರಣ ಗ್ರಾಹಕರು ಎಚ್ಚರಿಕೆ ವಹಿಸಿದ್ದಾರೆ’ ಎಂದು ಹೇಳಿದ್ದಾರೆ.
ವೈಯಕ್ತಿಕ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ಬೇಡಿಕೆಯು ಕಡಿಮೆ ಆಗಿದೆ. ಇದರಿಂದಾಗಿ ಮೈಕ್ರೊಸಾಫ್ಟ್‌ನ ವಿಂಡೋಸ್ ಹಾಗೂ ಇತರ ಕೆಲವು ತಂತ್ರಾಂಶಗಳಿಗೆ ಬೇಡಿಕೆ ಕಡಿಮೆ ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.