ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆದಾರರಿಗೆ ಬರೆ: ನಾಳೆಯಿಂದ ವೊಡಾಫೋನ್ ಐಡಿಯಾ, ಏರ್‌ಟೆಲ್‌, ಜಿಯೊ ದರ ಏರಿಕೆ

Last Updated 1 ಡಿಸೆಂಬರ್ 2019, 18:58 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್‌ ಬಳಕೆದಾರರು ಮಂಗಳವಾರದಿಂದ (ಡಿ. 3) ಪ್ರತಿ ಕರೆ ಮತ್ತು ಡೇಟಾ ಬಳಕೆಗೆ ಶೇ 42ರವರೆಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 3ರಿಂದ ಜಾರಿಗೆ ಬರುವಂತೆ ಮೊಬೈಲ್‌ ಕರೆ ಮತ್ತು ಡೇಟಾ ಶುಲ್ಕದಲ್ಲಿ ಏರಿಕೆಯನ್ನು ಘೋಷಿಸಿವೆ. ರಿಲಯನ್ಸ್‌ ಜಿಯೊ ಕಂಪನಿಯ ಶೇ 40ರಷ್ಟು ದರ ಏರಿಕೆಯು ಇದೇ 6ರಿಂದ ಅನ್ವಯಿಸಲಿದೆ.

ವೊಡಾಫೋನ್‌ ಐಡಿಯಾದ ಪ್ರೀ–ಪೇಯ್ಡ್‌ ಗ್ರಾಹಕರು ಒಟ್ಟಾರೆ ಶೇ42ರಷ್ಟು ಅಧಿಕ ಶುಲ್ಕ ತೆರಬೇಕಾಗಿದೆ. ಬೇರೆ ಕಂಪನಿಗಳ ಮೊಬೈಲ್‌ ನಂಬರ್‌ಗೆ ಕಾಲ್‌ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ.

ಅನಿಯಮಿತ ಕೊಡುಗೆಯಲ್ಲಿಹಾಲಿ ಇರುವ ಎಲ್ಲಾ ಪ್ಲ್ಯಾನ್‌ಗಳೂ ಹೊಸ ಪ್ಲ್ಯಾನ್‌ಗೆ ಬದಲಾಗಲಿವೆ. ಮಾರುಕಟ್ಟೆಯ ಪ್ರತಿಕ್ರಿಯೆ ಆಧಾರದ ಮೇಲೆ ಹೊಸ ಪ್ಲ್ಯಾನ್‌ನಲ್ಲಿ ಪರಿಷ್ಕರಣೆ ಆಗಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರಿ ನಷ್ಟದಲ್ಲಿರುವ ಈ ದೂರಸಂಪರ್ಕ ಸೇವಾ ಕಂಪನಿಗಳು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಗ್ರಾಹಕರಿಗೆ ನೀಡುವ ಸೇವೆಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡಿವೆ.

ಜಿಯೊ ಕಂಪನಿಯು ಹೊಸ ‘ಆಲ್‌ ಇನ್‌ ಒನ್‌ ಪ್ಲ್ಯಾನ್‌’ ಪರಿಚಯಿಸಲಿದ್ದು, ಅನಿಯಮಿತ ಕರೆ ಮತ್ತು ಡೇಟಾ ನೀಡಲಿದೆ. ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆಗೆ ಸಂಬಂಧಿಸಿದಂತೆ ನ್ಯಾಯೋಚಿತ ಬಳಕೆ ನೀತಿ ಪಾಲಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT