ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಡಿಎಗೆ ಸರಳ ಬಹುಮತ; ಆರ್ಥಿಕ ಸುಧಾರಣೆಗೆ ಸವಾಲು: ಮೂಡಿಸ್ ಇನ್ವೆಸ್ಟರ್ಸ್

Published 5 ಜೂನ್ 2024, 12:55 IST
Last Updated 5 ಜೂನ್ 2024, 12:55 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತ ಪಡೆದಿದೆ. ಹಾಗಾಗಿ, ಪರಿಣಾಮಕಾರಿಯಾಗಿ ಆರ್ಥಿಕ ಸುಧಾರಣಾ ಕ್ರಮಗಳ ಅನುಷ್ಠಾನಕ್ಕೆ ವಿಳಂಬವಾಗಬಹುದು. ಇದರಿಂದ ದೇಶದ ಹಣಕಾಸಿನ ಸ್ಥಿತಿಯ ಬಲವರ್ಧನೆಗೆ ತೊಡಕಾಗುವ ಸಾಧ್ಯತೆಯಿದೆ ಎಂದು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸಸ್‌ ಬುಧವಾರ ಹೇಳಿದೆ.

‘ಎನ್‌ಡಿಎ ಸರ್ಕಾರವು ತನ್ನ ನೀತಿಗಳನ್ನು ಮುಂದುವರಿಸಬಹುದು. ಮೂಲ ಸೌಕರ್ಯ ಅಭಿವೃದ್ಧಿ ಮತ್ತು ದೇಶೀಯ ಮಟ್ಟದಲ್ಲಿ ತಯಾರಿಕೆ ಚಟುವಟಿಕೆಗಳಿಗೆ ಬಜೆಟ್‌ನಲ್ಲಿ ಬಲ ನೀಡುವ ಸಾಧ್ಯತೆಯಿದೆ. ಇದು ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದು ಹೇಳಿದೆ.

ಸರ್ಕಾರಕ್ಕೆ ಹಲವು ಸವಾಲು:

‘ಎನ್‌ಡಿಎ ಮೈತ್ರಿಕೂಟವು ಸರ್ಕಾರ ರಚಿಸಬಹುದು. ಆದರೆ, ಸರ್ಕಾರದ ಕಾರ್ಯಸೂಚಿಗಳ ಅನುಷ್ಠಾನಕ್ಕೆ ಸವಾಲುಗಳು ಎದುರಾಗಲಿವೆ’ ಎಂದು ಫಿಚ್ ರೇಟಿಂಗ್ಸ್‌ ಸಂಸ್ಥೆ ಹೇಳಿದೆ.

ಬಿಜೆಪಿಯು ದೇಶದಲ್ಲಿನ ತಯಾರಿಕಾ ವಲಯದಲ್ಲಿ ಸ್ಪರ್ಧಾತ್ಮಕತೆಗೆ ಒತ್ತು ನೀಡಿತ್ತು. ಸರಳ ಬಹುಮತದಿಂದಾಗಿ ಇದರ ಮುಂದುವರಿಕೆಗೆ ತೊಡಕಾಗಬಹುದು. ಆದರೂ, ಸರ್ಕಾರದ ನೀತಿಗಳು ಮುಂದುವರಿಯುವ ನಿರೀಕ್ಷೆಯಿದೆ. ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಳವಾಗುವುದಿಂದ ವ್ಯಾಪಾರ ವಹಿವಾಟು ಸುಲಭವಾಗಲಿದೆ. ಇದು ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT