ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯ ಪರಿಣಾಮವಾಗಿ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಬಹುದು, ಅಲ್ಲಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಲೆಕ್ಕಾಚಾರವು ಭಾರತದ ಷೇರುಪೇಟೆ ಹೂಡಿಕೆದಾರರಲ್ಲಿ ನಡುಕ ಸೃಷ್ಟಿಸಿದೆ.

ದೇಶದ ಷೇರುಪೇಟೆಗಳ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರದ ವಹಿವಾಟಿನಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿವೆ.

ಟ್ರಂಪ್ ಅವರ ಸುಂಕ ನೀತಿ ಹಾಗೂ ಈ ನೀತಿಗೆ ಚೀನಾ ಕೈಗೊಂಡ ಪ್ರತೀಕಾರದ ಕ್ರಮಗಳ ಪರಿಣಾಮವಾಗಿ ಜಾಗತಿಕ ಆರ್ಥಿಕ ಬೆಳವಣಿಗೆಯು ಮಂದಗತಿಗೆ ತಿರುಗುವ ಭೀತಿ ಸೃಷ್ಟಿಯಾಗಿದೆ. ಇದು ಷೇರುಪೇಟೆಗಳಲ್ಲಿ ನಿರಾಶೆಯ ಕರಿಮೋಡಗಳು ಕವಿಯುವಂತೆ ಮಾಡಿದೆ. ದೇಶದ ಷೇರುಪೇಟೆಗಳಲ್ಲಿ ಸೋಮವಾರ ದಾಖಲಾದ ಕುಸಿತವು ಐದು ವರ್ಷಗಳ ವಹಿವಾಟಿನಲ್ಲಿ ಕಂಡ ಭಾರಿ ಕುಸಿತಗಳ ಪೈಕಿ ಒಂದಾಗಿದೆ. ಷೇರು ಹೂಡಿಕೆದಾರರಿಗೆ ಇದೊಂದು ಕೆಟ್ಟ ದಿನವಾಗಿತ್ತು.

ಮುಂಬೈ ಷೇರುಪೇಟೆಯ (ಬಿಎಸ್ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 10 ತಿಂಗಳ ಅತಿದೊಡ್ಡ ಕುಸಿತವನ್ನು ಸೋಮವಾರ ದಾಖಲಿಸಿತು. 2,226 ಅಂಶಗಳಷ್ಟು (ಶೇ 2.95ರಷ್ಟು) ಕುಸಿದ ಸೆನ್ಸೆಕ್ಸ್ 73,137 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ದಿನದ ವಹಿವಾಟಿನ ನಡುವಿನಲ್ಲಿ ಸೂಚ್ಯಂಕವು 3,939 ಅಂಶಗಳವರೆಗೂ ಇಳಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆಯ (ಎನ್ಎಸ್ಇ) ನಿಫ್ಟಿ ಸೂಚ್ಯಂಕವು 742 ಅಂಶ (ಶೇ 3.24) ಕುಸಿಯಿತು. ವಹಿವಾಟಿನ ನಡುವಿನಲ್ಲಿ ಸೂಚ್ಯಂಕವು 1,160 ಅಂಶಗಳವರೆಗೆ ಕುಸಿದಿತ್ತು. ಸೆನ್ಸೆಕ್ಸ್ನಲ್ಲಿ ಹಿಂದುಸ್ತಾನ್ ಯೂನಿಲಿವರ್ ಹೊರತುಪಡಿಸಿದರೆ ಬೇರೆ ಎಲ್ಲ ಕಂಪನಿಗಳ ಷೇರುಗಳ ಮೌಲ್ಯ ಕುಸಿಯಿತು.

ಶುಕ್ರವಾರದ ವಹಿವಾಟಿನಲ್ಲಿ ಅಮೆರಿಕದ ಷೇರುಪೇಟೆಗಳು ತೀವ್ರ ಕುಸಿತ ದಾಖಲಿಸಿದ್ದವು. ನಾಸ್ಡಾಕ್ ಮತ್ತು ಡವ್ ಸೂಚ್ಯಂಕಗಳು ಕನಿಷ್ಠ ಶೇ 5.5ರಷ್ಟು ಕುಸಿದಿದ್ದವು.

2024ರ ಜೂನ್ 4ರಂದು ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ 5.74ರಷ್ಟು, ನಿಫ್ಟಿ ಶೇ 5.93ರಷ್ಟು ಕುಸಿದಿದ್ದವು. ಆ ದಿನದ ನಂತರದ ಭಾರಿ ಕುಸಿತ ಸೋಮವಾರ ದಾಖಲಾಗಿದೆ. ಕೋವಿಡ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್ಡೌನ್ ಜಾರಿಗೊಳಿಸಿದಾಗ ಸೆನ್ಸೆಕ್ಸ್ ಮತ್ತು ನಿಫ್ಟಿ 2020ರ ಮಾರ್ಚ್ 23ರಂದು ಶೇ 13ಕ್ಕೂ ಹೆಚ್ಚು ಕುಸಿತ ದಾಖಲಿಸಿದ್ದವು.

ಬೇರೆ ದೇಶಗಳ ಜೊತೆ ಹೋಲಿಸಿದರೆ, ಟ್ರಂಪ್ ಅವರ ನೀತಿಯಿಂದಾಗಿ ಭಾರತದ ಮೇಲೆ ಆಗುವ ಪರಿಣಾಮವು ಸೀಮಿತವಾಗಿ ಇರಬಹುದಾದರೂ, ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕು ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಸಲಹೆ ನೀಡಿದ್ದಾರೆ.

ಷೇರು ಮಾರಾಟದ ಒತ್ತಡವು ಅದೆಷ್ಟು ತೀವ್ರವಾಗಿತ್ತೆಂದರೆ ಬಿಎಸ್ಇಯ ಎಲ್ಲ ವಲಯಗಳ ಸೂಚ್ಯಂಕಗಳೂ ಇಳಿಕೆ ಕಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.