ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಆರ್‌ಪಿಎಲ್‌ ಲಾಭ ₹ 1,013 ಕೋಟಿ

Published 29 ಜುಲೈ 2023, 21:51 IST
Last Updated 29 ಜುಲೈ 2023, 21:51 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌),  2023–24ರ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ಕಳೆದು ₹ 1,013 ಕೋಟಿ ಲಾಭ ಗಳಿಸಿದೆ. 2022–23ನೇ ಸಾಲಿನ ಮೊದಲ ಮೂರು ತಿಂಗಳಿನಲ್ಲಿ ಕಂಪನಿಯು ₹ 2,707 ಕೋಟಿ ಲಾಭ ಗಳಿಸಿತ್ತು.

2023–24ರ ಮೊದಲ ತ್ರೈಮಾಸಿಕದಲ್ಲಿ 43.6 ಲಕ್ಷ ಟನ್‌ ನಿರ್ವಹಣೆ ಮಾಡುವ ಮೂಲಕ ಸಂಸ್ಕರಣಾ ಘಟಕವು ಇದುವರೆಗಿನ ಗರಿಷ್ಠ ಸಾಧನೆ ಮಾಡಿದೆ. ಈ ಸಂಸ್ಕರಣಾ ಘಟಕವನ್ನು ಅದರ ಸಾಮರ್ಥ್ಯದ ಶೇ 116.26ರಷ್ಟನ್ನು ಈ ಅವಧಿಯಲ್ಲಿ ಬಳಕೆ ಮಾಡಿಕೊಂಡಿದೆ. ಈ ಘಟಕದ ವಾರ್ಷಿಕ ನಿರ್ವಹಣಾ ಸಾಮರ್ಥ್ಯ 150 ಲಕ್ಷ ಟನ್‌.

ಕಾರ್ಯಾಚರಣಾ ವರಮಾನ 2023–24ರ ಮೊದಲ ತ್ರೈಮಾಸಿಕದಲ್ಲಿ ₹ 24,832 ಕೋಟಿಗೆ ಇಳಿಕೆಯಾಗಿದೆ. 2022–23ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕಂಪನಿ ಕಾರ್ಯಚರಣಾ ವರಮಾನ ₹ 35,915 ಕೋಟಿ ಆಗಿತ್ತು. ಕಂಪನಿಯು ರಫ್ತಿನ ಮೂಲಕ ₹ 6,907 ಕೋಟಿ ವರಮಾನ ಗಳಿಸಿದೆ. ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ₹ 14,765 ಕೋಟಿ ವರಮಾನ ಗಳಿಸಿತ್ತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT