ನವದೆಹಲಿ: ಮ್ಯೂಚುವಲ್ ಫಂಡ್ (ಎಫ್.ಎಂ) ಸಂಸ್ಥೆಗಳ ನಿರ್ವಹಣಾ ಸಂಪತ್ತು 2024-25ರ ಆರ್ಥಿಕ ವರ್ಷದಲ್ಲಿ ಶೇ 23ರಷ್ಟು ಹೆಚ್ಚಾಗಿದ್ದು, ₹65 ಲಕ್ಷ ಕೋಟಿಯಷ್ಟಾಗಿದೆ.

2023–24ರ ಆರ್ಥಿಕ ವರ್ಷದ ಮಾರ್ಚ್ ಅಂತ್ಯಕ್ಕೆ ಉದ್ಯಮದ ನಿರ್ವಹಣಾ ಸಂಪತ್ತು ₹53 ಲಕ್ಷ ಕೋಟಿಯಷ್ಟಿತ್ತು. ಒಂದೇ ವರ್ಷದಲ್ಲಿ ಸಂಪತ್ತು ₹12 ಲಕ್ಷ ಕೋಟಿ ವೃದ್ಧಿಸಿದೆ. ಹೆಚ್ಚಿದ ಬಂಡವಾಳ ಒಳಹರಿವು, ದೇಶದ ಷೇರು ಸೂಚ್ಯಂಕಗಳ ಏರಿಕೆಯು ಸಂಪತ್ತು ಹೆಚ್ಚಾಗಲು ಕಾರಣವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್ಐ) ಸೋಮವಾರ ತಿಳಿಸಿದೆ.

ಮಾರ್ಚ್ ವೇಳೆಗೆ ಉದ್ಯಮದಲ್ಲಿ ಒಟ್ಟು 5.34 ಕೋಟಿ ಹೂಡಿಕೆದಾರರಿದ್ದಾರೆ. ಈ ಪೈಕಿ 1.38 ಕೋಟಿ (ಶೇ 26ರಷ್ಟು) ಮಹಿಳೆಯರಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.