ಶನಿವಾರ, ಸೆಪ್ಟೆಂಬರ್ 19, 2020
22 °C

ಎಂಎಫ್‌: ಜುಲೈನಲ್ಲಿ 5.6 ಲಕ್ಷ ಹೊಸ ಖಾತೆಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜುಲೈ ತಿಂಗಳಿನಲ್ಲಿ 5.63 ಲಕ್ಷ ಮ್ಯೂಚುವಲ್‌ ಫಂಡ್‌ ಖಾತೆಗಳನ್ನು ತೆರೆಯಲಾಗಿದೆ. ಇದರಿಂದಾಗಿ, ಮ್ಯೂಚುವಲ್ ಫಂಡ್‌ಗಳಲ್ಲಿನ ಒಟ್ಟು ಖಾತೆಗಳ ಸಂಖ್ಯೆ 9.2 ಕೋಟಿಗೆ ಹೆಚ್ಚಳ ಕಂಡಂತಾಗಿದೆ. ಸಾಲಪತ್ರಗಳನ್ನು ಆಧರಿಸಿದ ಫಂಡ್‌ಗಳಲ್ಲಿ ಜುಲೈ ತಿಂಗಳಿನಲ್ಲಿ ಹೆಚ್ಚಿನ ಖಾತೆಗಳನ್ನು ತೆರೆಯಲಾಗಿದೆ.

ಜೂನ್‌ ತಿಂಗಳಿನಲ್ಲಿ ಒಟ್ಟು 5 ಲಕ್ಷ ಖಾತೆಗಳನ್ನು ತೆರೆಯಲಾಗಿತ್ತು. ಜುಲೈನಲ್ಲಿ ತೆರೆಯಲಾದ ಹೊಸ ಖಾತೆಗಳ ಪೈಕಿ ನಾಲ್ಕು ಲಕ್ಷಕ್ಕಿಂತ ಹೆಚ್ಚಿನ ಖಾತೆಗಳು ಸಾಲಪತ್ರ ಆಧರಿಸಿದ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಉದ್ದೇಶದವು.

ಮಾರುಕಟ್ಟೆಯಲ್ಲಿನ ಅಸ್ಥಿರ ವಾತಾವರಣವು ಹೂಡಿಕೆದಾರರ ಎದೆಗುಂದಿಸಿಲ್ಲ ಎಂಬುದನ್ನು ಖಾತೆಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳವು ತೋರಿಸುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿನ ಮಾರುಕಟ್ಟೆ ಅಪಾಯಗಳ ಬಗ್ಗೆ ಹೂಡಿಕೆದಾರರಿಗೆ ಹೆಚ್ಚಿನ ಅರಿವು ಇದೆ ಎಂಬುದನ್ನೂ ಇದು ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಮಾರ್ಚ್‌ ತಿಂಗಳಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಕಂಡುಬಂದ ತೀವ್ರ ಕುಸಿತವು ಹೂಡಿಕೆದಾರರಿಗೆ ಒಳ್ಳೆಯ ಅವಕಾಶವನ್ನು ಒದಗಿಸಿತು. ಹಲವು ಜನ ಹೊಸ ಹೂಡಿಕೆದಾರರು ಇದನ್ನು ಒಂದು ಒಳ್ಳೆಯ ಅವಕಾಶವನ್ನಾಗಿ ಪರಿಗಣಿಸಿರಬಹುದು’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಜುಲೈನಲ್ಲಿ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಒಟ್ಟು ₹ 89,813 ಕೋಟಿ ಹೂಡಿಕೆ ಮಾಡಿದ್ದಾರೆ.

ಅಂಕಿ–ಅಂಶ

* ಮೇ ತಿಂಗಳಲ್ಲಿ ತೆರೆದ ಖಾತೆಗಳ ಸಂಖ್ಯೆ- 6.13 ಲಕ್ಷ

* ಏಪ್ರಿಲ್‌ನಲ್ಲಿ ತೆರೆದ ಖಾತೆಗಳು- 6.82 ಲಕ್ಷ

* ಮಾರ್ಚ್‌ನಲ್ಲಿ ತೆರೆದ ಖಾತೆಗಳು- 9.1 ಲಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು