ಭಾನುವಾರ, ಜನವರಿ 19, 2020
29 °C
ಸಂಪತ್ತು ನಿರ್ವಹಣಾ ಮೊತ್ತ ಶೇ 13ರಷ್ಟು ಹೆಚ್ಚಳ

ಎಂಎಫ್‌: ₹ 3.15 ಲಕ್ಷ ಕೋಟಿ ಸೇರ್ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮ್ಯೂಚುವಲ್‌ ಫಂಡ್ಸ್‌ಗಳು ನಿರ್ವಹಿಸುವ ಸಂಪತ್ತಿಗೆ (ಎಯುಎಂ) 2019ರಲ್ಲಿ ₹ 3.15 ಲಕ್ಷ ಕೋಟಿ ಹೊಸದಾಗಿ ಸೇರ್ಪಡೆಯಾಗಿದೆ.

ಸಾಲದ ಯೋಜನೆಗಳಲ್ಲಿ ಹೆಚ್ಚಿದ ಹೂಡಿಕೆ ಮತ್ತು ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಕೈಗೊಂಡ ಕ್ರಮಗಳಿಂದ ಮ್ಯೂಚುವಲ್‌ ಫಂಡ್ಸ್‌ಗಳು ನಿರ್ವಹಿಸುವ ಸಂಪತ್ತು ಶೇ 13ರಷ್ಟು ಹೆಚ್ಚಳ ಕಂಡಿದೆ.

2018ರ ಡಿಸೆಂಬರ್‌ ಅಂತ್ಯಕ್ಕೆ ₹ 23.62 ಲಕ್ಷ ಕೋಟಿಗಳಷ್ಟಿದ್ದ ‘ಎಯುಎಂ’, 2019ರ ಡಿಸೆಂಬರ್‌ ಅಂತ್ಯಕ್ಕೆ ₹ 26.77 ಲಕ್ಷ ಕೋಟಿಗೆ ತಲುಪಿರುವುದು ಮ್ಯೂಚುವಲ್‌ ಫಂಡ್ಸ್‌ ಸಂಘ (ಎಎಂಎಫ್‌ಐ) ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದು ಬರುತ್ತದೆ.

ಮ್ಯೂಚುವಲ್‌ ಫಂಡ್‌ ಉದ್ದಿಮೆಯಲ್ಲಿನ 44 ಕಂಪನಿಗಳು ನಿರ್ವಹಿಸುವ ಸಂಪತ್ತಿನ ಮೌಲ್ಯವು 2018ಕ್ಕೆ ಹೋಲಿಸಿದರೆ ಈ ವರ್ಷ ಶೇ 7.5ರಷ್ಟು ಹೆಚ್ಚಳವಾಗಿದೆ. 2017ರಲ್ಲಿ ಈ ಬೆಳವಣಿಗೆಯು ಶೇ 32ರಷ್ಟಿತ್ತು. ಆ ವರ್ಷ ₹ 5.4 ಲಕ್ಷ ಕೋಟಿ ಸಂಪತ್ತು ಹೊಸದಾಗಿ ಸೇರ್ಪಡೆಯಾಗಿತ್ತು.

ಷೇರು ಮತ್ತು ಸ್ಥಿರ ಆದಾಯದ ಸಾಲಪತ್ರಗಳು ಹೆಚ್ಚಿನ ವರಮಾನ ನೀಡದಿರುವ ಸದ್ಯದ ದಿನಗಳಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಹೂಡಿಕೆ ಹರಿವು ಎರಡಂಕಿ ಬೆಳವಣಿಗೆ ಕಂಡಿರುವುದು ಸಕಾರಾತ್ಮಕ ಸಂಗತಿಯಾಗಿದೆ ಎಂದು ಉದ್ದಿಮೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ನಿರ್ವಹಣಾ ಸಂಪತ್ತು 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು