ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಫ್‌ : ₹ 27.85 ಲಕ್ಷ ಕೋಟಿ ಸಂಪತ್ತು ನಿರ್ವಹಣೆ

Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಮ್ಯೂಚುವಲ್‌ ಫಂಡ್ಸ್‌ ಉದ್ದಿಮೆಯು ನಿರ್ವಹಿಸುತ್ತಿರುವ ಸಂಪತ್ತಿನ ಮೊತ್ತವು 2020ರ ಜನವರಿ ಅಂತ್ಯಕ್ಕೆ ₹ 27.85 ಲಕ್ಷ ಕೋಟಿಗೆ ತಲುಪಿದೆ.

ಷೇರು, ಟ್ರೆಷರಿ ಬಿಲ್ಸ್‌ನಂತಹ ಅಲ್ಪಾವಧಿಯ ಸಾಲ ನಿಧಿಗಳಲ್ಲಿ ಹೆಚ್ಚಿದ ಹಣದ ಹರಿವಿನಿಂದಾಗಿ ಸಂಪತ್ತು ನಿರ್ವಹಣೆ ಪ್ರಮಾಣವು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಈ ವರ್ಷದ ಜನವರಿಯಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳಿಗೆ ₹ 1.2 ಲಕ್ಷ ಕೋಟಿ ಹೂಡಿಕೆ ಹರಿದು ಬಂದಿದೆ. 2019ರ ಡಿಸೆಂಬರ್‌ನಲ್ಲಿ ₹ 61,810 ಕೋಟಿ ಹರಿದು ಬಂದಿತ್ತು. ದೇಶದಲ್ಲಿ 44 ಸಂಸ್ಥೆಗಳು ಮ್ಯೂಚುವಲ್ ಫಂಡ್‌ ವಹಿವಾಟು ನಡೆಸುತ್ತಿವೆ.

ಟ್ರೆಷರಿ ಬಿಲ್ಸ್‌, ಕಮರ್ಷಿಯಲ್ ಪೇಪರ್‌ನಂತಹ ಅಲ್ಪಾವಧಿ ಸಾಲ ನಿಧಿಗಳಲ್ಲಿ ₹ 59,683 ಕೋಟಿ ಹೂಡಿಕೆಯಾಗಿದೆ.

‘ಉದ್ದಿಮೆಯ ನಿರ್ವಹಣೆಯಲ್ಲಿ ಇರುವ ಸಂಪತ್ತಿನ ಸರಾಸರಿ ಮೊತ್ತವು ಜನವರಿಯಲ್ಲಿ ₹ 28.18 ಲಕ್ಷ ಕೋಟಿಗೆ ತಲುಪಿತ್ತು. ಹಣ ಹೂಡುವ ಮತ್ತು ಹಿಂದೆ ಪಡೆಯುವ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹೆಚ್ಚಿದ ಹೂಡಿಕೆ ಮತ್ತು ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ) ಜನಪ್ರಿಯತೆಯೇ ಇದಕ್ಕೆ ಕಾರಣ’ ಎಂದು ಮ್ಯೂಚುವಲ್‌ ಫಂಡ್ಸ್‌ ಸಂಘಗಳ ಸಿಇಒ ಎನ್‌. ಎಸ್‌. ವೆಂಕಟೇಶ್‌ ಹೇಳಿದ್ದಾರೆ.

‘ಜನವರಿಯಲ್ಲಿ ‘ಎಸ್‌ಐಪಿ’ಯ ತಿಂಗಳ ಕೊಡುಗೆಯು ಸಾರ್ವಕಾಲಿಕ ದಾಖಲೆ ಮಟ್ಟವಾದ ₹ 8,532 ಕೋಟಿಗೆ ತಲುಪಿದೆ. ಮ್ಯೂಚುವಲ್‌ ಫಂಡ್ಸ್‌ಗಳು ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಯ ಮಾರ್ಗವಾಗಿರುವುದು ಸಾಮಾನ್ಯ ಹೂಡಿಕೆದಾರರಿಗೆ ಮನದಟ್ಟಾಗಿರುವುದನ್ನು ಇದು ಸೂಚಿಸುತ್ತದೆ. ಎಂಎಫ್‌ಗಳ ಸಂಪತ್ತು ನಿರ್ವಹಣೆ ಮೊತ್ತದಲ್ಲಿನ ಹೆಚ್ಚಳವು ಇದೇ ಬಗೆಯಲ್ಲಿ ಮುಂದುವರೆಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವಧಿ; ಸಂಪತ್ತು ನಿರ್ವಹಣೆ (₹ ಲಕ್ಷ ಕೋಟಿಗಳಲ್ಲಿ)

2019ರ ಜನವರಿ; 23.37

2019ರ ಡಿಸೆಂಬರ್; 26.54

2020ರ ಜನವರಿ; 27.85

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT