ಶುಕ್ರವಾರ, ಜುಲೈ 1, 2022
23 °C

ಆಗಸ್ಟ್‌ 1ರಿಂದ ವಾರವಿಡೀ ಎನ್‌ಎಸಿಎಚ್‌ ಸೌಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಎನ್‌ಎಸಿಎಚ್‌ (ನ್ಯಾಷನಲ್‌ ಆಟೊಮೇಟೆಡ್ ಕ್ಲಿಯರಿಂಗ್ ಹೌಸ್‌) ವ್ಯವಸ್ಥೆಯು ಆಗಸ್ಟ್‌ 1ರಿಂದ ಅನ್ವಯವಾಗುವಂತೆ ವಾರದ ಎಲ್ಲ ದಿನವೂ ಕೆಲಸ ನಿರ್ವಹಿಸಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

ಈ ವ್ಯವಸ್ಥೆಯ ಉಸ್ತುವಾರಿಯನ್ನು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ನೋಡಿಕೊಳ್ಳುತ್ತದೆ. ಒಂದು ಖಾತೆಯಿಂದ ಹಲವು ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಈ ವ್ಯವಸ್ಥೆ ಬಳಸಿಕೊಳ್ಳಲಾಗುತ್ತದೆ. ಕಂಪನಿಗಳ ಲಾಭಾಂಶ, ಠೇವಣಿಗಳ ಮೇಲಿನ ಬಡ್ಡಿ, ನೌಕರರಿಗೆ ಸಂಬಳ, ನಿವೃತ್ತರಿಗೆ ಪಿಂಚಣಿ ಹಣ ವರ್ಗಾವಣೆ ಮಾಡಲು ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಈಗಿರುವ ನಿಯಮಗಳ ಪ್ರಕಾರ ಎನ್‌ಎಸಿಎಚ್‌ ವ್ಯವಸ್ಥೆಯು ಕೆಲಸದ ದಿನಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಆಗಸ್ಟ್‌ 1ರ ನಂತರ, ವಾರಾಂತ್ಯದಲ್ಲಿ ಕೂಡ ವೇತನದ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.