ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7.33 ಕೋಟಿ ಬಾಟಲಿ ದ್ರವರೂಪದ ನ್ಯಾನೊ ಯೂರಿಯಾ ಮಾರಾಟ: ಕೇಂದ್ರ ಸರ್ಕಾರ

Published 9 ಫೆಬ್ರುವರಿ 2024, 16:07 IST
Last Updated 9 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ 2021ರ ಆಗಸ್ಟ್‌ನಿಂದ ಪ್ರಸಕ್ತ ವರ್ಷದ ಜನವರಿ ಅಂತ್ಯದವರೆಗೆ ಸುಮಾರು 7.33 ಕೋಟಿ ಬಾಟಲಿ (ಪ್ರತಿ 500 ಎಂ.ಎಲ್‌) ದ್ರವರೂಪದ ನ್ಯಾನೊ ಯೂರಿಯಾ ಮಾರಾಟವಾಗಿದೆ. ಈ ಪೈಕಿ 4.84 ಲಕ್ಷ ಬಾಟಲಿಗಳನ್ನು ರಫ್ತು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು, ಶುಕ್ರವಾರ ಲೋಕಸಭೆಗೆ ತಿಳಿಸಿದೆ.  

‘ರಸಗೊಬ್ಬರ ನಿಯಂತ್ರಣ ಆದೇಶದ (ಎಫ್‌ಸಿಒ) ಅನ್ವಯ 2021ರ ಫೆಬ್ರುವರಿ 24ರಿಂದ ದೇಶದಲ್ಲಿ ಈ ಮಾದರಿಯ ಯೂರಿಯಾ ತಯಾರಿಕೆಗೆ ಕೃಷಿ ಸಚಿವಾಲಯವು, ಇಫ್ಕೊಗೆ ಅನುಮತಿ ನೀಡಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಅವರು, ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

ಅಲ್ಲದೇ, 2023ರ ಮಾರ್ಚ್‌ 6ರಂದು ರಾಯ್‌ ನ್ಯಾನೊ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಕ್ಕೂ ಮೂರು ವರ್ಷಗಳ ಅವಧಿಗೆ ಈ ಯೂರಿಯಾ ತಯಾರಿಕೆಗೆ ಸಚಿವಾಲಯವು ಅನುಮತಿ ನೀಡಿದೆ ಎಂದು ಹೇಳಿದ್ದಾರೆ. 

ಸರ್ಕಾರವು ನ್ಯಾನೊ ಯೂರಿಯಾ ತಯಾರಿಕಾ ಘಟಕಗಳ ಸ್ಥಾಪನೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಆದರೆ, ದೇಶದಲ್ಲಿ ಹೊಸದಾಗಿ ಆರು ತಯಾರಿಕಾ ಘಟಕಗಳ ಸ್ಥಾಪನೆಗೆ ರಸಗೊಬ್ಬರ ಕಂಪನಿಗಳು ನಿರ್ಧರಿಸಿವೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT