ನವದೆಹಲಿ: ಬಳಕೆಗೆ ಭಾಗಶಃ ಮುಕ್ತವಾಗಿರುವ ರಾಷ್ಟ್ರೀಯ ಎಕ್ಸ್ಪ್ರೆಸ್ವೇ ಶುಲ್ಕವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳನ್ನು ತಿದ್ದುಪಡಿ ಮಾಡಿದೆ.

ತಿದ್ದುಪಡಿ ಕಂಡಿರುವ ನಿಯಮಗಳು ಭಾನುವಾರದಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಗುರುವಾರ ಹೇಳಿದೆ.

ಇದರ ಪ್ರಕಾರ, ರಾಷ್ಟ್ರೀಯ ಎಕ್ಸ್ಪ್ರೆಸ್ವೇ ಪೂರ್ಣವಾಗಿ (ಅಂದರೆ ಶುರುವಿನಿಂದ ಕೊನೆಯವರೆಗೆ) ಬಳಕೆಗೆ ಮುಕ್ತವಾಗಿರದಿದ್ದಾಗ, ಅದರ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯವಾಗುವ ಕಡಿಮೆ ದರದಲ್ಲಿ, ಪೂರ್ಣಗೊಂಡಷ್ಟು ಭಾಗಕ್ಕೆ ಮಾತ್ರ ನಿಗದಿ ಮಾಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಈಗಿನ ನಿಯಮಗಳ ಪ್ರಕಾರ, ರಾಷ್ಟ್ರೀಯ ಎಕ್ಸ್ಪ್ರೆಸ್ವೇ ಬಳಕೆದಾರರಿಗೆ, ಪೂರ್ಣಗೊಂಡಷ್ಟು ಭಾಗಕ್ಕೆ ಅನ್ವಯವಾಗುವ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿಗಳ ಶುಲ್ಕದ ಶೇ 25ರಷ್ಟು ಹೆಚ್ಚಿನ ದರದಲ್ಲಿ ವಿಧಿಸಲಾಗುತ್ತಿದೆ.

ಹೊಸ ನಿಯಮವು ಜಾರಿಗೆ ಬಂದ ದಿನದಿಂದ ಒಂದು ವರ್ಷದವರೆಗೆ ಅಥವಾ ಎಕ್ಸ್ಪ್ರೆಸ್ವೇ ಪೂರ್ತಿಯಾಗಿ ಬಳಕೆಗೆ ಮುಕ್ತವಾಗುವವರೆಗೆ ಅನ್ವಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.