ಬುಧವಾರ, ಜೂಲೈ 8, 2020
28 °C

ಭಾರತದ ವೃದ್ಧಿ ದರ ಶೂನ್ಯ?: ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ ಅಂದಾಜು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: 2020–21ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೂನ್ಯ ಮಟ್ಟದಲ್ಲಿ ಇರಲಿದೆ ಎಂದು ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ ಅಂದಾಜಿಸಿದೆ.

ಸರ್ಕಾರದ ಸಾಲ ಹೆಚ್ಚಳ, ಹೆಚ್ಚಲಿರುವ ತೆರಿಗೆ ವರಮಾನದ ಕೊರತೆ, ಮೂಲ ಸೌಕರ್ಯ ವಲಯದಲ್ಲಿ ಕಾಣದ ಪ್ರಗತಿ ಮತ್ತು ದುರ್ಬಲ ಹಣಕಾಸು ವಲಯಗಳ ಕಾರಣಕ್ಕೆ ವೃದ್ಧಿ ದರವು ಏರಿಳಿತ ಕಾಣದೇ ಒಂದೇ ಮಟ್ಟದಲ್ಲಿ ಇರಲಿದೆ ಎಂದು ಕಾರಣಗಳನ್ನು ಪಟ್ಟಿ ಮಾಡಿದೆ. 2022ರಲ್ಲಿ ಶೇ 6.6 ಪ್ರಗತಿ ಕಾಣಲಿದೆ ಎಂದು ಆಶಾವಾದ ಮೂಡಿಸಿದೆ.

ಗ್ರಾಮೀಣ ಆರ್ಥಿಕತೆ ಮೇಲಿನ ಒತ್ತಡ, ಕುಂಠಿತ ಉತ್ಪಾದನಾ ಚಟುವಟಿಕೆ ಮತ್ತು ಉದ್ಯೋಗ ಅವಕಾಶಗಳಲ್ಲಿನ ಇಳಿಕೆ ಮತ್ತಿತರ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿ ದರದ ಗುಣಮಟ್ಟ ಕುಸಿದಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು