ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

EPFO ವ್ಯಾಪ್ತಿಗೆ 28 ಲಕ್ಷ ಮಹಿಳಾ ಉದ್ಯೋಗಿಗಳ ಸೇರ್ಪಡೆ

Published 14 ಡಿಸೆಂಬರ್ 2023, 15:41 IST
Last Updated 14 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿ ಸಂಘಟನೆಯ ವ್ಯಾಪ್ತಿಗೆ ಹೊಸದಾಗಿ 28.69 ಲಕ್ಷ ಮಹಿಳಾ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ.  

2019–20ರ ಕೋವಿಡ್‌ ಸಾಂಕ್ರಾಮಿಕದ ವೇಳೆ ಹೊಸದಾಗಿ ಮಹಿಳಾ ಉದ್ಯೋಗಿಗಳ ಸೇರ್ಪಡೆಯು 15.93 ಲಕ್ಷ ಇತ್ತು ಎಂದು ಕೇಂದ್ರ ಸರ್ಕಾರವು, ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.

ಚಂದಾದಾರಿಕೆಯಲ್ಲಿನ ಈ ನಿವ್ವಳ ಸೇರ್ಪಡೆಯು ಉದ್ಯೋಗ ಸೃಷ್ಟಿ, ಉದ್ಯೋಗ ಮಾರುಕಟ್ಟೆಯ ಔಪಚಾರಿಕತೆ ಮತ್ತು ಸಂಘಟಿತ/ ಅರೆ-ಸಂಘಟಿತ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯ ಪ್ರಯೋಜನ ಲಭಿಸುತ್ತಿರುವ ಸೂಚಕವಾಗಿದೆ ಎಂದು ಕೇಂದ್ರ ಕಾರ್ಮಿಕ ಖಾತೆಯ ರಾಜ್ಯ ಸಚಿವ ರಾಮೇಶ್ವರ್‌ ತೇಲಿ ಅವರು.  ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT